HEALTH TIPS

ರೇಡಾರ್‌, ಲಘು ಹೆಲಿಕಾಪ್ಟರ್‌ ಖರೀದಿಗೆ ಒಪ್ಪಿಗೆ

ನವದೆಹಲಿ (PTI): ಸೇನೆಯ ಮೂರೂ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ರೇಡಾರ್‌ಗಳು ಮತ್ತು ಲಘು ಹೆಲಿಕಾಪ್ಟರ್‌ಗಳು ಒಳ ಗೊಂಡಂತೆ ₹1.10 ಲಕ್ಷ ಕೋಟಿ ಮೌಲ್ಯದ ಸೇನಾ ಪ‍ರಿಕರಗಳ ಖರೀದಿಗೆ ರಕ್ಷಣಾ ಸಚಿವಾಲಯ ಸೋಮವಾರ ಅನುಮೋದನೆ ನೀಡಿದೆ. 


'ಭೂಸೇನೆಗಾಗಿ ರಾಸಾಯನಿಕ, ಜೈವಿಕ, ವಿಕಿರಣ ಮತ್ತು ಪರಮಾಣು (ಸಿಬಿಆರ್‌ಎನ್‌) ಶೋಧಿಸುವ ವಾಹನ,ಹೈ ಮೊಬಿಲಿಟಿ ವಾಹನಗಳು (ಎಚ್‌ಎಂವಿ), ಸ್ವಯಂಚಾಲಿತ ಮೆಕ್ಯಾನಿಕಲ್ ಮೈನ್ ಲೇಯರ್‌ಗಳು (ಎಂಎಂಎಲ್‌), ಅತ್ಯಾಧುನಿಕ ಲಘು ಹೆಲಿಕಾಪ್ಟರ್‌ಗಳು (ಎಎಲ್‌ಎಚ್‌), ಟ್ರಾಲ್ ಟ್ಯಾಂಕ್‌ಗಳು ಮತ್ತು 'ಸರ್ವತ್ರ' ಬ್ರಿಡ್ಜ್‌ ಸಿಸ್ಟಂ ಖರೀದಿಸಲು ಅನುಮೋದನೆ ನೀಡಲಾಗಿದೆ' ಎಂದು ಸಚಿವಾಲಯ ಹೇಳಿದೆ.

ಸಿಬಿಆರ್‌ಎನ್‌ ಪರಿಶೋಧನಾ ವಾಹನಗಳು ರಾಸಾಯನಿಕ, ಅನಿಲ, ವಿಕಿರಣ ಸೋರಿಕೆಯಂತಹ ವಿಪತ್ತು ಸಂಭವಿಸಿದಾಗ ಕ್ಷಿಪ್ರ ಕಾರ್ಯಾಚರಣೆ ನಡೆಸಲು ಸಮರ್ಥವಾಗಿರುತ್ತವೆ. ಎಚ್‌ಎಂವಿಗಳು ಕಡಿದಾದ ಪ್ರದೇಶಗಳಲ್ಲಿ ಸರಕು ಸಾಗಣೆ ಸೇರಿದಂತೆ ವಿವಿಧ ಕಾರ್ಯಾಚರಣೆ ಸಾಮರ್ಥ್ಯ ಹೊಂದಿವೆ.

'ಎಎಲ್‌ಎಚ್‌ಗಳು ಸೇನೆ ಮತ್ತು ವಾಯುಪಡೆಗೆ ಎಲ್ಲಾ ರೀತಿಯ ಭೂಪ್ರದೇಶ ಮತ್ತು ಕಾರ್ಯಾಚರಣೆಯ ಸನ್ನಿವೇಶಗಳಲ್ಲಿ ನೆರವಾಗಲಿವೆ. ವಿವಿಧ ಭೂಪ್ರದೇಶಗಳಲ್ಲಿನ ಕಾರ್ಯಾಚರಣೆಗಳ ಸಂದರ್ಭದಲ್ಲಿ ಸೈನಿಕರು ಒಂದೆಡೆಯಿಂದ ಇನ್ನೊಂದು ಪ್ರದೇಶಕ್ಕೆ ತೆರಳಲು ಟ್ರಾಲ್‌ ಟ್ಯಾಂಕ್‌ಗಳು ಮತ್ತು ಸರ್ವತ್ರ ಸೇತುವೆ ವ್ಯವಸ್ಥೆ ಬಳಸಲಾಗುತ್ತದೆ' ಎಂದು ಪ್ರಕಟಣೆ ತಿಳಿಸಿದೆ.

ರಕ್ಷಣಾ ಸಚಿವ ರಾಜನಾಥ ಸಿಂಗ್‌ ನೇತೃತ್ವದ ರಕ್ಷಣಾ ಖರೀದಿ ಪರಿಷತ್ತು (ಡಿಎಸಿ) ಈ ಪರಿಕರಗಳ ಖರೀದಿಗೆ ಒಪ್ಪಿಗೆ ನೀಡಿದೆ. ಅನುಮೋದನೆ ನೀಡಲಾದ ಒಟ್ಟು ಖರೀದಿ ಪ್ರಸ್ತಾವಗಳಪೈಕಿ, ಶೇಕಡ 98ರಷ್ಟು ಪ‍ರಿಕರಗಳ ಖರೀದಿಯನ್ನು ಭಾರತದ ಕಂಪನಿಗಳಿಂದಲೇ ಮಾಡಲಾಗುತ್ತದೆ.

ನೌಕಾಪಡೆಗೆ 'ಅರುಧ್ರಾ'‌

ನೌಕಾಪಡೆಗಾಗಿ 'ಅರುಧ್ರಾ' ರೇಡಾರ್‌ಗಳ ಖರೀದಿ, ಮರೀನ್ ಗ್ಯಾಸ್ ಟರ್ಬೈನ್‌ (ಎಂಜಿಟಿ) ವಿನ್ಯಾಸ, ಅಭಿವೃದ್ಧಿ ಮತ್ತು ಖರೀದಿಗೆ ಅನುಮೋದನೆ ನೀಡಲಾಗಿದೆ.

'ಅರುಧ್ರಾ' ರೇಡಾರ್‌ಗಳು ನೌಕಾಪಡೆಯ ವಿವಿಧ ನೆಲೆಗಳಲ್ಲಿ ಪ್ರಸ್ತುತ ಬಳಕೆಯಲ್ಲಿ ರುವ 'ಏರ್‌ ರೂಟ್‌ ಸರ್ವೇಲನ್ಸ್‌ ರೇಡಾರ್‌'ಗಳ ಸ್ಥಾನವನ್ನು ತುಂಬಲಿವೆ. ಆಧುನಿಕ ಯುದ್ಧನೌಕೆಗಳಲ್ಲಿ ಬಳಸುವ ಎಂಜಿಟಿಯು ವಿದೇಶಿ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries