HEALTH TIPS

ಶ್ರೀಸ್ಕಂದ ಯಕ್ಷಗಾನ ಕೇಂದ್ರದಲ್ಲಿ ಮುಖವರ್ಣಿಕೆ ತರಗತಿಗೆ ಚಾಲನೆ

ಕಾಸರಗೋಡು: ಯಕ್ಷಗಾನದಲ್ಲಿ ಮುಂದಿನ ಜನಾಂಗವನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಪಾಯಿಚ್ಚಾಲಿನ ಶ್ರೀಸ್ಕಂದಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ತರಗತಿಯ ಜೊತೆಗೆ ಮುಖವರ್ಣಿಕೆ ತರಗತಿಗೆ ಚಾಲನೆ ನೀಡಲಾಯಿತು. 


ಶೇಷವನ ಶ್ರೀಕ್ಷೇತ್ರದ ಮಯೂರಮಂಟಪದಲ್ಲಿ ನಡೆದ ಸಮಾರಂಭದಲ್ಲಿ ನಾಟ್ಯಗುರು ಪಾವಂಜೆ ಮೇಳದ ಕಲಾವಿದ ರಂಜಿತ್ ಗೋಳಿಯಡ್ಕ ಮಕ್ಕಳಿಗೆ ಮುಖವರ್ಣಿಕೆಯ ತರಗತಿ ನಡೆಸಿಕೊಟ್ಟರು. ದೇವೇಂದ್ರಬಲ ದಂತಹ ವೇಷಗಾರಿಕೆಗೆ ಬೇಕಾದಂತಹ ಬಣ್ಣಗಾರಿಕೆಯನ್ನು ಪ್ರತಿಯೊಬ್ಬ ಶಿಬಿರಾರ್ಥಿಗಳಿಗೆ ಮಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಕಿರೀಟ ವೇಷ, ಬಣ್ಣದವೇಷದ ಬಣ್ಣಗಾರಿಕೆ, ಚಿಟ್ಟಿ ಇಡುವ ಕ್ರಮ, ಹಸಿ ಬಣ್ಣ ಇತ್ಯಾದಿಗಳನ್ನು ಕಲಿಸಿಕೊಡಲಾಗುವುದೆಂದು ತಿಳಿಸಿದರು. ಯಕ್ಷಗಾನದ ಉದಯೋನ್ಮಕ ಕಲಾವಿದ ಅರ್ಜುನ್ ಕೂಡ್ಲು,

ಶ್ರೀಸ್ಕಂದ ಯಕ್ಷಗಾನಕೇಂದ್ರದ ಅಧ್ಯಕ್ಷ ಕಿರಣ್ ಪ್ರಸಾದ್ ಕೂಡ್ಲು ತರಬೇತಿಗೆ ಸಹಕರಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries