ಸಶಸ್ತ್ರ ಪಡೆಗಳಲ್ಲಿ ಮಹಿಳೆಯರು ಐದು ದಶಕಗಳಿಂದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇದುವರೆಗೆ ವೈದ್ಯಕೀಯ ಮತ್ತು ನರ್ಸಿಂಗ್ ವಿಭಾಗದ ಮಹಿಳಾ ಅಧಿಕಾರಿಗಳೇ ಟು-ಸ್ಟಾರ್ ಸೇರಿದಂತೆ ಉನ್ನತ ಹುದ್ದೆಗಳಿಗೆ ಏರಿದ್ದರು.
1992ರಲ್ಲಿ ಮೊದಲ ಬಾರಿಗೆ ಮಹಿಳಾ ಕೆಡೆಟ್ ಗಳನ್ನು ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡಮಿ ಮತ್ತು ಬೆಂಗಳೂರಿನ ಜಾಲಹಳ್ಳಿಯ ವಾಯುಪಡೆ ತಾಂತ್ರಿಕ ಕಾಲೇಜಿಗೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಬಳಿಕದ ಮೂರು ದಶಕಗಳಲ್ಲಿ ಮಹಿಳಾ ಅಧಿಕಾರಿಗಳು ಫ್ಲೈಟ್ ಕಮಾಂಡರ್, ಕಮಾಂಡಿಂಗ್ ಆಫೀಸರ್ ಹಾಗೂ ಒನ್-ಸ್ಟಾರ್ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
1994ರಲ್ಲಿ ವಾಯುಪಡೆಯ ಶಿಕ್ಷಣ ವಿಭಾಗಕ್ಕೆ ಸೇರ್ಪಡೆಗೊಂಡ ಶಕ್ತಿ ಶರ್ಮಾ ಅವರು ವಿವಿಧ ತರಬೇತಿ ಸಂಸ್ಥೆಗಳು ಮತ್ತು ಕಮಾಂಡ್ ಕಚೇರಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ವೈದ್ಯಕೀಯೇತರ ವಿಭಾಗದಿಂದ ವಾಯುಪಡೆಯ ಮೊದಲ ಮಹಿಳಾ ಗ್ರೂಪ್ ಕ್ಯಾಪ್ಟನ್ ಆಗಿಯೂ ಅವರು ಸೇವೆ ಸಲ್ಲಿಸಿದ್ದರು.
ಇದಲ್ಲದೆ, ಸೈನಿಕ್ ಸ್ಕೂಲ್ ಕಪುರ್ತಲಾದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಮೂರು ಸಶಸ್ತ್ರ ಪಡೆಗಳ ಪೈಕಿ ಮೊದಲ ಮಹಿಳಾ ಅಧಿಕಾರಿಯೂ ಶಕ್ತಿ ಶರ್ಮಾ ಅವರಾಗಿದ್ದಾರೆ.

