ನವದೆಹಲಿ: ದೇಶದಲ್ಲಿಯೇ ತಯಾರಿಸಿದ ಮೊದಲ ಅತ್ಯಾಧುನಿಕ ಇಪಿ-6000 ಎಂಡೋಸ್ಕೋಪಿ ವ್ಯವಸ್ಥೆಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಯು ತನ್ನ ಗ್ಯಾಸ್ಟ್ರೊಎಂಟರಾಲಜಿ ವಿಭಾಗದಲ್ಲಿ ಅಳವಡಿಸಿಕೊಂಡಿದೆ.
'ಅಗತ್ಯವಿರುವ ರೋಗಿಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಫುಜಿ ಫಿಲ್ಮ್ ಇಂಡಿಯಾ ಕಂಪನಿಯು ಇಪಿ-6000 ಎಂಡೋಸ್ಕೋಪಿ ವ್ಯವಸ್ಥೆಯನ್ನು ಆಸ್ಪತ್ರೆಗೆ ದಾನವಾಗಿ ನೀಡಿದೆ.
ರೋಗಿಗಳಿಗೆ ವಿಶೇಷ ಗ್ಯಾಸ್ಟ್ರೊಎಂಟರಾಲಜಿ ಆರೈಕೆಗಳನ್ನು ಒದಗಿಸಲು ಮತ್ತು ಅದರ ಸಾಮರ್ಥ್ಯವನ್ನು ಬಲಪಡಿಸಲು ಇದು ಸಹಾಯಕವಾಗಲಿದೆ' ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದರು.
ಕೇಂದ್ರದ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಭಾಗವಾಗಿ ಫುಜಿ ಫಿಲ್ಮ್ ಇಂಡಿಯಾ ಕಂಪನಿಯು ಜೋಧ್‌ಪುರದಲ್ಲಿ ಎಂಡೋಸ್ಕೋಪಿ ಉಪಕರಣಗಳ ತಯಾರಿಕಾ ಕೇಂದ್ರವನ್ನು ಸ್ಥಾಪಿಸಿದೆ.

