ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ (ಎನ್‌ಟಿಎ) ವಿಷಯ ತಜ್ಞರಾಗಿ ಕಾರ್ಯನಿರ್ವಹಿಸಲು ಆಸಕ್ತಿ ಹೊಂದಿರುವ ಅನುಭವಿ ಶಿಕ್ಷಣ ತಜ್ಞರು ಮತ್ತು ಸಂಶೋಧಕರು ತಮ್ಮ ಶೈಕ್ಷಣಿಕ ಅರ್ಹತೆಯ ದಾಖಲೆಗಳನ್ನು ಸಲ್ಲಿಸುವಂತೆ ಎನ್‌ಟಿಎ ಆಹ್ವಾನಿಸಿದೆ.
'ಉನ್ನತ ಮಟ್ಟದ ಚಿಂತನೆ, ಅನ್ವಯಿಕ ಮತ್ತು ಪಠ್ಯಕ್ರಮ ಆಧಾರಿತ ಪ್ರಶ್ನೆಗಳ ರಚನೆ, ಪರಿಕಲ್ಪನಾತ್ಮಕ ನಿಖರತೆ, ಸ್ಪಷ್ಟತೆ ಮತ್ತು ಶೈಕ್ಷಣಿಕ ಬದ್ಧತೆಯನ್ನು ಖಚಿತಪಡಿಸುವುದು, ಪ್ರಾದೇಶಿಕ ಭಾಷೆಗಳ ನಿಖರ ಬಳಕೆ ಮತ್ತು ಸಾಂಸ್ಕೃತಿಕ ಹಾಗೂ ಭಾಷಾಶಾಸ್ತ್ರೀಯವಾಗಿ ಉತ್ತಮ ಅನುವಾದ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವರು ಸೇವೆ ಸಲ್ಲಿಸಬಹುದು' ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಎನ್‌ಟಿಎ ಅಧಿಕೃತ ಪೋರ್ಟಲ್ ಮೂಲಕ ಅಕ್ಟೋಬರ್ 9ರೊಳಗೆ ತಮ್ಮ ದಾಖಲೆಗಳನ್ನು ಸಲ್ಲಿಸಬಹುದು.

