HEALTH TIPS

ಕೊಚ್ಚಿಯಲ್ಲಿ ವಿಜೃಂಭಣೆಯ 'ಕೇರಳ-ಕರ್ನಾಟಕ ಜಾನಪದ ಉತ್ಸವ': ಸಚಿವ ಅಬ್ದುಲ್ ಗಫೂರ್ ಅವರಿಂದ ಸಾಧಕರಿಗೆ ಪ್ರಶಸ್ತಿ ಪ್ರದಾನ

ಕುಂಬಳೆ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಜಾನಪದ ಪರಿಷತ್ತು (ಕಜಾಪ) ಕೇರಳ ಗಡಿನಾಡ ಘಟಕದ ಜಂಟಿ ಆಶ್ರಯದಲ್ಲಿ ಭಾನುವಾರ ಕೊಚ್ಚಿ ನಗರದ ಕಲೂರ್ ಗೋಕುಲಂ ಪಾರ್ಕ್ ಕನ್ವೆನ್ಷನ್ ಸೆಂಟರ್‍ನಲ್ಲಿ 'ಕೇರಳ-ಕರ್ನಾಟಕ ಜಾನಪದ ಉತ್ಸವ' ವೈಭವದಿಂದ ಜರುಗಿತು. ಈ ಐತಿಹಾಸಿಕ ಸಮಾರಂಭದ ಅಂಗವಾಗಿ ಕಜಾಪ ಕೇರಳ ಗಡಿನಾಡ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ನೂತನ ಕೃತಿ ಬಿಡುಗಡೆ, ಬಹುಭಾಷಾ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ವಹಿಸಿದ್ದರು. ಎರ್ನಾಕುಳಂ ಶಾಸಕ ಟಿ.ಜೆ. ವಿನೋದ್ ಕಾರ್ಯಕ್ರಮವನ್ನು ಡೋಲು ಬಾರಿಸಿ ವಿದ್ಯುಕ್ತವಾಗಿ ಉದ್ಘಾಟಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗಡಿನಾಡಿನಲ್ಲಿ ಕನ್ನಡ ಭಾಷೆ ಹಾಗೂ ಸಾಂಸ್ಕøತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಅಗತ್ಯತೆಯ ಕುರಿತು ಬೆಳಕು ಚೆಲ್ಲಿದರು.

ಸಾಧಕರಿಗೆ ಪ್ರಶಸ್ತಿ ಪ್ರದಾನಗೈದು ಶ್ಲಾಘಿಸಿದ ಸಚಿವ ವಿ.ಇ. ಅಬ್ದುಲ್ ಗಫೂರ್: 

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೇರಳ ರಾಜ್ಯದ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ವಿ.ಇ. ಅಬ್ದುಲ್ ಗಫೂರ್ ಅವರು, "ಕಲೆ, ಸಾಹಿತ್ಯ ಮತ್ತು ಜಾನಪದ ಸಂಸ್ಕೃತಿಗೆ ಭೌಗೋಳಿಕ ಗಡಿಗಳ ಹಂಗಿಲ್ಲ. ಕರ್ನಾಟಕ ಮತ್ತು ಕೇರಳ ರಾಜ್ಯಗಳು ಶತಮಾನಗಳಿಂದಲೂ ಅವಿನಾಭಾವ ಸಾಂಸ್ಕೃತಿಕ, ಸಾಮಾಜಿಕ ಮತ್ತು ಭಾವನಾತ್ಮಕ ಬಾಂಧವ್ಯವನ್ನು ಹಂಚಿಕೊಂಡು ಬಂದಿವೆ. ಭಾಷೆ ಮತ್ತು ಭೂಪ್ರದೇಶ ಬೇರೆಯಾಗಿದ್ದರೂ ಜನಪದ ಕಲೆಗಳು ಮಾನವೀಯ ಮೌಲ್ಯಗಳನ್ನು ಮತ್ತು ಪರಸ್ಪರ ಪ್ರೀತಿಯನ್ನು ಬೆಸೆಯುವ ಶಕ್ತಿ ಹೊಂದಿವೆ. ಗಡಿನಾಡಿನಲ್ಲಿ ಇಂತಹ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವುದರಿಂದ ಉಭಯ ರಾಜ್ಯಗಳ ಜನರ ನಡುವೆ ಭ್ರಾತೃತ್ವ ಹಾಗೂ ಸೌಹಾರ್ದತೆ ಇನ್ನಷ್ಟು ಗಟ್ಟಿಯಾಗುತ್ತದೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

'ಸಾಧಕ ರತ್ನ' ಪ್ರಶಸ್ತಿ ಪ್ರದಾನ:

ಇದೇ ಸಂದರ್ಭದಲ್ಲಿ ಸಚಿವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಪ್ರಮುಖ ಸಾಧಕರಾದ ಡಾ. ಶಿವರಾಮ ಕೆ. ಭಂಡಾರಿ, ಪ್ರಸನ್ನ ಕುಮಾರ್, ಡಾ. ಸಂದೀಪ್ ಪುರಂದರ ಶೆಟ್ಟಿ, ಎಸ್. ಜಗದೀಶ್ ಚಂದ್ರ ಅಂಚನ್, ಶಾಫಿ ಎಂ. ಬಂಡಸಾಲೆ ಮತ್ತು ರಾಘವ ಚೇರಾಲ್ ಅವರಿಗೆ 'ಸಾಧಕ ರತ್ನ' ಪ್ರಶಸ್ತಿ ನೀಡಿ ಗೌರವಿಸಿದರು. ಜೊತೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಸತ್ಯನಾರಾಯಣ ಬೆಳೇರಿ ಅವರನ್ನು ಗೌರವಿಸಲಾಯಿತು. ಜೊತೆಗೆ ಸಚಿವರು ಕರ್ನಾಟಕ ಜಾನಪದ ಪರಿಷತ್ತಿನ ಕರ್ನಾಟಕ-ಕೇರಳ ಪೋಕ್ ಆರ್ಟ್-ಕಲ್ಚರಲ್ ಹೆರಿಟೇಜ್ ಇನ್ನೋವೇಶನ್ ಸೆಂಟರ್ ನ ನೀಲನಕ್ಷೆಯನ್ನು ಅನಾವರಣಗೊಳಿಸಿದರು.  

ಪದಗ್ರಹಣ, ಕೃತಿ ಬಿಡುಗಡೆ ಹಾಗೂ ಕವಿಗೋಷ್ಠಿ:

ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಅಧ್ಯಕ್ಷ ಹಾಗೂ ವಿಶ್ರಾಂತ ಕುಲಪತಿ ಪೆÇ್ರ. ಹಿ.ಚಿ. ಬೋರಲಿಂಗಯ್ಯ ಅವರು ಕಜಾಪ ಕೇರಳ ಘಟಕದ ನೂತನ ಸಾರಥಿಗಳ ಪದಗ್ರಹಣವನ್ನು ಅಧಿಕೃತವಾಗಿ ಘೋಷಿಸಿ ಶುಭ ಹಾರೈಸಿದರು. ಇದೇ ವೇದಿಕೆಯಲ್ಲಿ ಲೇಖಕಿ, ಪ್ರಾಧ್ಯಾಪಕಿ ಲಕ್ಷ್ಮೀ ಮಹೇಶ್ ರಾಜು ಅವರ 'ಇಲ್ಲಿ-ಇಂತು-ಹೀಗೆ' ಕವನ ಸಂಕಲನವನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು. ಕವಯತ್ರಿ ಲಕ್ಷ್ಮಿ ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯು ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು.

ವೇದಿಕೆಯಲ್ಲಿ ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಆಯೋಗದ ಸದಸ್ಯ ಟಿ.ಎಂ.ಶಾಹಿದ್, ಕಸಾಪ ಕೇರಳ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಗಡಿ ಪ್ರಾಧಿಕಾರದ ಸದಸ್ಯರಾದ ಎ.ಆರ್. ಸುಬ್ಬಯ್ಯಕಟ್ಟೆ, ಶಿವರೆಡ್ಡಿ ಖ್ಯಾಡೇದ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸದಸ್ಯ ಎನ್. ಚನಿಯಪ್ಪ ನಾಯ್ಕ್, ಕೊಚ್ಚಿ ಚಂಗಪ್ಪುಝ ಸಾಂಸ್ಕೃತಿಕ ವೇದಿ ಸದಸ್ಯ ಟಿ.ಜಿ. ರವಿಕುಮಾರ್, ಗಮಕ ಕಲಾಪರಿಷತ್ತು ಗಡಿನಾಡ ಘಟಕಾಧ್ಯಕ್ಷ ಟಿ. ಶಂಕರನಾರಾಯಣ ಭಟ್ ಹಾಗೂ ಸಮಾಜ ಸೇವಕ ಸಿದ್ದೀಕ್ ಪಚ್ಚಂಬಳ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

ಆರಂಭದಲ್ಲಿ ಕಜಾಪ ಕೇರಳ ಘಟಕಾಧ್ಯಕ್ಷ ಡಾ. ಮಲ್ಲಿಕಾರ್ಜುನ ಎಸ್. ನಾಸಿ ಸ್ವಾಗತಿಸಿ, ಕಜಾಪ ಕೇರಳ ಘಟಕದ ಪ್ರಧಾನ ಕಾರ್ಯದರ್ಶಿ ರವಿ ನಾಯ್ಕಾಪು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಕಲಾತಂಡಗಳಿಂದ ಪ್ರದರ್ಶನಗೊಂಡ ವೈವಿಧ್ಯಮಯ ಸಾಂಸ್ಕೃತಿಕ ಕಲಾ ಪ್ರಕಾರಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries