ಮಂಜೇಶ್ಚರ: ಮಂಜೇಶ್ವರ ಪೆÇಲೀಸ್ ಠಾಣಾ ವ್ಯಾಪ್ತಿಯ ವರ್ಕಾಡಿ ಅರಿಬೈಲು ನಿವಾಸಿ ರಾಮ ಮೂಲ್ಯ ಅವರ ಪುತ್ರ ಶ್ರೇಯಾನ್ ಕುಲಾಲ್ (14) ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕೊಡ್ಲಮೊಗರು ಶ್ರೀವಾಣಿ ವಿಜಯ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯಾಗಿರುವ ಶ್ರೇಯಾನ್ ಕುಮಾರ್, ಸೆ. 3ರಂದು ಸಂಜೆ ಶಾಲೆ ಬಿಟ್ಟು ಮನೆಗೆ ತೆರಳಲು ಬಸ್ಸನ್ನೇರಿದ್ದರೂ, ಮನೆಗೆ ತಲುಪದೇ ಕಾಣೆಯಾಗಿರುವುದಾಗಿ ಪೊಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ನೀಲಿ ಪ್ಯಾಂಟು, ಬಿಳಿ ಬಣ್ಣದ ಅಂಗಿ ಒಳಗೊಂಡ ಸಮವಸ್ತ್ರ ಹೊಂದಿರುವ ಈತನನ್ನು ಪತ್ತೆಹಚ್ಚಿದವರು, ಮಂಜೇಶ್ವರ ಪೊಲೀಸ್ ಠಾಣೆಗೆ ( 9497947263, 9400188350) ಮಾಹಿತಿ ನೀಡುವಂತೆ ಪೊಲೀಸರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


