HEALTH TIPS

ಪತ್ರಕರ್ತರಿಗೆ ಶ್ವೇತಭವನ ಪ್ರವೇಶ ನಿಷೇಧಕ್ಕೆ ತಡೆ: ಯುಎಸ್ ಫೆಡರಲ್ ನ್ಯಾಯಾಲಯ ಆದೇಶ

ನ್ಯೂಯಾರ್ಕ್‌ (AP): ಸಿಎನ್‌ಎನ್‌, ಎಂಎಸ್‌ ನೌ ಮತ್ತು ಪೊಲಿಟಿಕೊ ಸುದ್ದಿ ಸಂಸ್ಥೆಗಳ ಪತ್ರಕರ್ತರಿಗೆ ಶ್ವೇತಭವನದ ಪ್ರವೇಶವನ್ನು ನಿಷೇಧಿಸಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ‌ಟ್ರಂಪ್‌ ಅವರು ಹೊರಡಿಸಿದ್ದ ಆದೇಶಕ್ಕೆ ಫೆಡರಲ್‌ ನ್ಯಾಯಾಧೀಶ ತಿಮೋತಿ ಕೆಲ್ಲಿ ಅವರು ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ. 


'ಪತ್ರಕರ್ತರ ಪ್ರವೇಶವನ್ನು ಕೂಡಲೇ ಮರುಸ್ಥಾಪಿಸ ಬೇಕು. ಈ ಮಾಧ್ಯಮಗಳ ಪತ್ರಕರ್ತರು ಮುಂದಿನ 14 ದಿನಗಳ ಕಾಲ ಎಂದಿನಂತೆ ಶ್ವೇತಭವನ ಪ್ರವೇಶಿಸಿ ವರದಿ ಮಾಡಬಹುದು' ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.‌

'ಈ ತಡೆಯಾಜ್ಞೆಯನ್ನು ಪಡೆಯಲು ಕಾನೂನುಬದ್ಧವಾಗಿ ಅಗತ್ಯವಿರುವ ಸಾಕ್ಷ್ಯ ಮತ್ತು ಕಾರಣಗಳನ್ನು ಮಾಧ್ಯಮ ಸಂಸ್ಥೆಗಳು ಯಶಸ್ವಿಯಾಗಿ ನ್ಯಾಯಾಲಯದ ಮುಂದೆ ನಿರೂಪಿಸಿವೆ. ಯಾವುದೇ ಮುನ್ಸೂಚನೆ ಅಥವಾ ಸೂಕ್ತ ಕಾರಣ ನೀಡದೆ ಏಕಾಏಕಿ ಪತ್ರಕರ್ತರ ಪಾಸ್‌ಗಳನ್ನು ರದ್ದುಗೊಳಿಸಿದ್ದು ತಪ್ಪು' ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries