ಕಾಸರಗೋಡು: ನೂತನ ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್ ಐಎಎಸ್ ಅವರನ್ನು ಜಿಲ್ಲಾಧಿಕಾರಿ ಚೇಂಬರ್‍ನಲ್ಲಿ ಪೆರ್ಲದ ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘದ ನಿಯೋಗ ಭೇಟಿ ಮಾಡಿ ಸನ್ಮಾನಿಸಿತು. ಈ ಸಂದರ್ಭ ಮರಾಟಿ ಪರಿಶಿಷ್ಟ ಪಂಗಡದ ಹಾಗೂ ಪೆರ್ಲ ಪ್ರದೇಶದ ವಿವಿಧ ಅಭಿವೃದ್ಧಿ ಮತ್ತು ಸಾಂಸ್ಕøತಿಕ ವಿಷಯಗಳ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು.
1953 ರಲ್ಲಿ ಅಂದಿನ ಮದ್ರಾಸ್ ಸರ್ಕಾರದ ನೆರವಿನಿಂದ ಆರಂಭಗೊಂಡ ಪೆರ್ಲದ ಐತಿಹಾಸಿಕ 'ಮರಾಟಿ ಬೋಡಿರ್ಂಗ್ ಹಾಲ್'ನ ಇತಿಹಾಸ ಹಾಗೂ ಪ್ರಸಕ್ತ ನಡೆಯುತ್ತಿರುವ ಕಲ್ಯಾಣ ಕಾರ್ಯಕ್ರಮಗಳ ವಿವರಗಳನ್ನೊಳಗೊಂಡ ಮನವಿ ಪತ್ರವನ್ನು ನಿಯೋಗ ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು. ಮರಾಟಿ ಪರಿಶಿಷ್ಟ ಪಂಗಡದ ಪಾರಂಪರಿಕ ಕೇಂದ್ರವಾಗಿರುವ ಬೋಡಿರ್ಂಗ್ ಹಾಲ್ ಮೂಲಕ ಶಾರದಾ ಮರಾಟಿ ಮಹಿಳಾ ವೇದಿಕೆ ಹಾಗೂ ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಸಂಸ್ಕೃತಿ ಸಂರಕ್ಷಣೆ, ಉಚಿತ ವೈದ್ಯಕೀಯ ಶಿಬಿರ, ಶಿಕ್ಷಣ ಪೆÇ್ರೀತ್ಸಾಹ, ಸಿ.ಪಿ.ಆರ್ ತರಬೇತಿ, ಧನಸಹಾಯ ವಿತರಣೆ ಮತ್ತು ವಿಪತ್ತು ಪರಿಹಾರ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿರುವುದಾಗಿ ಮಾಹಿತಿ ನೀಡಲಾಯಿತು. ಪೆರ್ಲದಲ್ಲಿರುವ ಪಾರಂಪರಿಕ ಮರಾಟಿ ಬೋಡಿರ್ಂಗ್ ಹಾಲ್‍ಗೆ ಭೇಟಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿಯೋಗವು ಆಹ್ವಾನ ನೀಡಿತು.
ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಡಾ. ಬಿ. ಜಿ. ನಾಯ್ಕ್, , ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ ಅಧ್ಯಕ್ಷೆ ಪುಷ್ಪಾ ಅಮೆಕ್ಕಳ, ಎಣ್ಮಕಜೆ ಗ್ರಾಪಂ ಅಧ್ಯಕ್ಷೆ ಕುಸುಮಾªಯ್ಕಿತರ ಪದಾಧಿಕಾರಿಗಳಾದ ಗೋಪಿಕೃಷ್ಣ ಬದಿಯಡ್ಕ, ಡಾ. ಬಿ. ನಾರಾಯಣ ನಾಯ್ಕ, ಸಿ.ಎಚ್ ಗೋವಿಂದ ನಾಯ್ಕ, ಜಗದೀಶ ನಾಯ್ಕ, ಬಾಲಕೃಷ್ಣ ನಾಯ್ಕ ಉಪಸ್ಥಿತರಿದ್ದರು.



