HEALTH TIPS

ವಿಶ್ವಸಂಸ್ಥೆಯ ಸಭೆಯಲ್ಲಿ ಪಾಲ್ಗೊಳ್ಳಲು ಫೆಲೆಸ್ತೀನ್ ನಿಯೋಗಕ್ಕೆ ವೀಸಾ ನಿರಾಕರಿಸಿದ ಅಮೆರಿಕ

ವಾಶಿಂಗ್ಟನ್: ವಿಶ್ವಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಲು ಆಗಮಿಸಬೇಕಿದ್ದ ಫೆಲೆಸ್ತೀನ್‍ನ ನಿಯೋಗಕ್ಕೆ ಟ್ರಂಪ್ ಆಡಳಿತವು ಸತತ ಎರಡನೇ ವರ್ಷವೂ ವೀಸಾವನ್ನು ನಿರಾಕರಿಸಿದೆ.


ಇಸ್ರೇಲ್‍ನೊಂದಿಗೆ ಶಾಂತಿ ಸ್ಥಾಪಿಸುವ ಕುರಿತು ಹಿಂದಿನ ಒಪ್ಪಂದಗಳಲ್ಲಿ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಲು ಫೆಲೆಸ್ತೀನಿಯನ್ ಅಧಿಕಾರಿಗಳು ಹಾಗೂ `ಫೆಲೆಸ್ತೀನಿಯನ್ ಅಥಾರಿಟಿ'ಯ ಅಧ್ಯಕ್ಷ ಮಹಮೂದ್ ಅಬ್ಬಾಸ್ ವಿಫಲರಾಗಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಬುಧವಾರ ತಿಳಿಸಿದೆ. 

ಫೆಲೆಸ್ತೀನ್‌ ಅಥಾರಿಟಿಯು(ಪಿಎ) ಅಂತರ್‍ರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಮತ್ತು ಅಂತರ್‍ರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‍ನಲ್ಲಿ ಇಸ್ರೇಲ್ ವಿರುದ್ಧ ಕಾನೂನು ಕ್ರಮಗಳನ್ನು ಮುಂದುವರಿಸಿದೆ ಹಾಗೂ ಇಸ್ರೇಲಿ ಪ್ರಜೆಗಳ ಮೇಲಿನ ದಾಳಿಯಲ್ಲಿ ಶಿಕ್ಷೆಗೆ ಗುರಿಯಾದ ಕೈದಿಗಳ ಕುಟುಂಬಗಳಿಗೆ ಸಹಾಯಧನ ನೀಡುವುದನ್ನು ಮುಂದುವರಿಸಿದೆ ಎಂದು ಇಲಾಖೆ ಹೇಳಿದೆ.

ಅಮೆರಿಕಕ್ಕೆ ನೀಡಿದ ಭರವಸೆಗಳಿಗೆ ವಿರುದ್ಧವಾಗಿ ಸುಧಾರಣೆ ತರಲು ಅವರು ವಿಫಲರಾಗಿರುವುದು ಹಾಗೂ ಶಾಂತಿಯ ಸಾಧ್ಯತೆಗಳನ್ನು ಕುಗ್ಗಿಸುವ ಅವರ ನಿರಂತರ ಚಟುವಟಿಕೆಗಳ ಪರಿಣಾಮವಾಗಿ, ಪ್ರಸ್ತುತ ಇರುವ ಅಮೆರಿಕನ್ ಕಾನೂನಿಗೆ ಅನುಗುಣವಾಗಿ ಪಿಎ ಅಧಿಕಾರಿಗಳಿಗೆ ವೀಸಾ ನಿರಾಕರಿಸುವ ನಿರ್ಬಂಧಗಳನ್ನು ಅಮೆರಿಕ ವಿಸ್ತರಿಸಲಿದೆ ಎಂದು ಇಲಾಖೆ ತಿಳಿಸಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries