ಮಂಜೇಶ್ವರ: ಕೇರಳ ರಾಜ್ಯ ಪಿಣಚಣಿದಾರರ ಸಂಘ(ಕೆಎಸ್‍ಪಿಎಸ್)ವರ್ಕಾಡಿ ಘಟಕದ ವಾರ್ಷಿಕ ಮಹಾಸಭೆ ದೈಗೋಳಿಯ ಶ್ರೀ ರಾಮಕೃಷ್ಣ ಭಜನಾ ಮಂದಿರದಲ್ಲಿ ಜರುಗಿತು. . ಸಂಘಟನೆ ಜಿಲ್ಲಾಧ್ಯಕ್ಷ ನಾಗರಾಜ ಸಮಾರಂಭ ಉದ್ಘಾಟಿಸಿದರು. ಎ .ಶಂಕರನಾರಾಯಣ ಉಡುಪ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಘಟಕದ ಹಿರಿಯ ಸದಸ್ಯೆ ವೇದೋಡಿ ದೇವಕಿಅಮ್ಮ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನವಾಗತರಾದ ಶ್ರೀನಿವಾಸ ಭಟ್, ಶ್ಯಾಮ್ ಭಟ್ ಹಾಗೂ ಪುಷ್ಪಾವತಿ ಟೀಚರ್ ಅವರನ್ನು ಹಿರಿಯ ಸದಸ್ಯರು ಶಾಲು ಹೊದಿಸುವ ಮೂಲಕ ಸಂಘಟನೆಗೆ ಬರಮಾಡಿಕೊಂಡರು. 2025 - 2026 ರ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ವೆಎಂಕಪ್ಪ ಶೆಟ್ಟಿ, ವಾರ್ಷಿಕ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಭೋಜ ಮಾಸ್ಟರ್ ಮಂಡಿಸಿದರು. ಮುಂದಿನ ಎರಡು ವರ್ಷಗಳಿಗೆ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ವರ್ಕಾಡಿ ಘಟಕದ ನೂತನ ಅಧ್ಯಕ್ಷ ಶ್ರೀನಿವಾಸ ರಾವ್ ಮಿತ್ತಮಲಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ನಿರ್ಮಲಾ ಟೀಚರ್ ಪ್ರಾರ್ಥನೆ ಹಾಡಿದರು. ಘಟಕದ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಸತ್ಯನಾರಾಯಣ ಮಾಸ್ಟರ್ ಪಜ್ವ ವಂದಿಸಿದರು.



