HEALTH TIPS

ವಕೀಲರ ಪರಿಷತ್ ಕಾಸರಗೋಡು ಘಟಕದಿಂದ ಕುಟುಂಬ ಸಮ್ಮಿಲನ

ಕಾಸರಗೋಡು: ವಕೀಲರ ಪರಿಷತ್ ಕಾಸರಗೋಡು ಘಟಕದ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಕಾಸರಗೋಡು ಸಹಕಾರಿ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಚಿನ್ಮಯ ಮಿಷನ್‍ನ ಬ್ರಹ್ಮಚಾರಿಣಿ ದಿಶಾ ಚೈತನ್ಯ ಸಮಾರಂಭ ಉದ್ಘಾಟಿಸಿದರು. 

ವಕೀಲರ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ, ವಕೀಲ ಎ.ಸಿ. ಅಶೋಕ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ವಕೀಲ ವೃಥ್ತಿಯಲ್ಲಿ 50 ವರ್ಷಗಳ ಸೇವೆಯನ್ನು ಪೂರೈಸಿರುವ ವಕೀಲ ಸಿ. ದಾಮೋದರ ಅವರನ್ನು ಸನ್ಮಾನಿಸಲಾಯಿತು.

ವಿವಿಧ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘಟನೆ ರಾಜ್ಯ ಸಮಿತಿ ಉಪಾಧ್ಯಕ್ಷ ವಕೀಲ ಬಿ. ರವೀಂದ್ರನ್ ಮತ್ತು ಕಾಞಂಗಾಡ್ ಘಟಕದ ಅಧ್ಯಕ್ಷ ವಕೀಲ ಕೆ.ಜಿ. ಅನಿಲ್ ಉಪಸ್ಥಿತರಿದ್ದರು.  ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕøತಿಕ ವೈವಿಧ್ಯ ನಡೆಯಿತು. ಪರಿಷತ್ ಜಿಲ್ಲಾ ಕಾರ್ಯದರ್ಶಿ ವಕೀಲ ಕೆ.ಜೆ. ನವೀನ್‍ರಾಜ್ ಸ್ವಾಗತಿಸಿದರು. ಕಾಸರಗೋಡು ಘಟಕದ ಅಧ್ಯಕ್ಷ ಪ್ರಕಾಶ್ ರಾವ್ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries