ಕಾಸರಗೋಡು: ಕ್ವಾರ್ಟರ್ಸ್‌ಗೆ ನುಗ್ಗಿದ ಮುಳ್ಳು ಹಂದಿಯನ್ನು ಹೊಡೆದು ಕೊಲೆಗೈದ ಪ್ರಕರಣದಲ್ಲಿ ಮೂವರು ಆರೋಪಿಗಳು ನ್ಯಾಯಾಲ ಯದಲ್ಲಿ ಶರಣಾಗಿದ್ದಾರೆ. ಕುಶಾಲನಗರ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಮೀಪ ವಾಸಿಸುವ ರಂಜಿತ್ ಯಾನೆ ಕಣ್ಣನ್ (26), ತಲೆಹೊರೆ ಕಾರ್ಮಿಕ ಚಾರುದಾಸನ್ (36), ಆವಿ ನಿವಾಸಿ ಅನಿಲ್ ಯಾನೆ ಮಣಿ (26) ಎಂಬಿ ವರು ಹೊಸದುರ್ಗ ನ್ಯಾಯಾಲಯ ದಲ್ಲಿ ಶರಣಾದ ಆರೋಪಿಗಳಾಗಿ ದ್ದಾರೆ. ಈ ತಿಂಗಳ 19ರಂದು ರಾತ್ರಿ ಕಾಞಂಗಾಡ್ ಆವಿಯಲ್ಲಿರುವ ಕ್ವಾರ್ಟರ್ಸ್‌ಗೆ ಮುಳ್ಳುಹಂದಿ ನುಗ್ಗಿತ್ತು. ಅದನ್ನು ಆರೋಪಿಗಳು ಇವರು ಕೂಡಿಹಾಕಿದ್ದರು.
ಮರುದಿನ ಬೆಳಿಗ್ಗೆ ಕೊಠಡಿಯ ಬಾಗಿಲು ತೆರೆದಾಗ ಹೊರಗೆ ಓಡಿಹೋದ ಮುಳ್ಳುಹಂದಿಯನ್ನು ಆರೋಪಿಗಳು ಕಲ್ಲೆಸೆದು, ಹೊಡೆದು ಕೊಲೆಗೈದಿದ್ದರು. ನಾಗರಿಕರು ನೀಡಿದ ಮಾಹಿತಿಯಂತೆ ಕಾಞಂಗಾಡ್ ಫಾರೆಸ್ಟ್ ರೇಂಜ್ ಆಫೀಸ್‌ನ ಬೀಟ್ ಫಾರೆಸ್ಟ್ ಆಫೀಸರ್‌ಗಳಾದ ಜಿತಿನ್, ಅನಶ್ವರ ಎಂಬಿವರು ಸ್ಥಳಕ್ಕೆ ತಲುಪಿದ್ದರು. ಅಲ್ಲಿ ಪರಿಶೀಲನೆ ನಡೆಸಿ ಸಿಸಿ ಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದರು. ಈ ಘಟನೆಯಲ್ಲಿ ಕಟ್ಟಡದ ಮಾಲಕನನ್ನು ಈ ಮೊದಲು ಪೊಲೀಸರು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದ್ದರು. ಬಳಿಕ ಅರಣ್ಯ ಇಲಾಖೆ ಕೇಸು ದಾಖಲಿಸುವು ದರೊಂದಿಗೆ ಆರೋಪಿಗಳು ತಲೆಮರೆಸಿ ಕೊಂಡಿದ್ದರು.

