ನವದೆಹಲಿ (PTI): ಕೆಲವು ವರ್ಷಗಳವರೆಗೆ ಯುಪಿಐ ವಹಿವಾಟು ಮೇಲೆ ಶೂನ್ಯ ಶುಲ್ಕವನ್ನು ಮುಂದುವರಿಸುವಂತೆ ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕರೆನ್ಸಿ ಮತ್ತು ಜಿಡಿಪಿ ಅನುಪಾತವು ಕಡಿಮೆ ಆಗುವ ಲಕ್ಷಣ ಕಾಣುವವರೆಗಾದರೂ ಶೂನ್ಯ ಶುಲ್ಕದ ವ್ಯವಸ್ಥೆ ಮುಂದುವರಿಯುವ ಅಗತ್ಯ ಇದೆ.
ಆ ಬಳಿಕ ಪರಿಸ್ಥಿತಿಯನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.
ಯುಪಿಐ ಮೂಲಕ ನಡೆಸುವ ಆಯ್ದ ಪಾವತಿಗಳಿಗೆ ಕೇಂದ್ರ ಸರ್ಕಾರವು ಶೇ 0.4ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್ ಶುಲ್ಕ) ವಿಧಿಸಲು ಈಚೆಗೆ ತೀರ್ಮಾನಿಸಿದೆ.

