HEALTH TIPS

ಮಾಜಿ ಐಎಎಸ್‌ ಅಧಿಕಾರಿ ದಿವ್ಯಾ ಮಿತ್ತಲ್‌ ರಾಜಕೀಯಕ್ಕೆ

ಲಖನೌ (PTI): ಮಾಜಿ ಐಎಎಸ್‌ ಅಧಿಕಾರಿ ದಿವ್ಯಾ ಮಿತ್ತಲ್‌ ಅವರು ರಾಜಕೀಯ ಪ್ರವೇಶಿಸುತ್ತಿರುವುದಾಗಿ ಮಂಗಳವಾರ ಘೋಷಿಸಿದ್ದಾರೆ.


ಉತ್ತರ ಪ್ರದೇಶದಿಂದ ಸ್ವತಂತ್ರ್ಯ ಅಭ್ಯರ್ಥಿಯಾಗಿ ತಮ್ಮ ರಾಜಕೀಯ ಪಯಣ ಆರಂಭಿಸುವುದಾಗಿ ಘೋಷಿಸಿರುವ ಅವರು, ಸಾರ್ವಜನಿಕರ ಧ್ವನಿಯಾಗಿ ತಾವು ಕಾರ್ಯ ನಿರ್ವಹಿಸುವುದಾಗಿ ಹೇಳಿಕೊಂಡಿದ್ದಾರೆ. 

ಇದಕ್ಕೆ ಸಂಬಂಧಿಸಿದಂತೆ 'ಎಕ್ಸ್‌'ನಲ್ಲಿ ವಿಡಿಯೊ ಸಂದೇಶವನ್ನೂ ಹಂಚಿಕೊಂಡಿದ್ದಾರೆ.

'ನನ್ನ ವೃತ್ತಿ ಜೀವನದಲ್ಲಿ ಸಾರ್ವಜನಿಕರ ಕುಂದುಕೊರತೆಗೆ ಸಂಬಂಧಿಸಿದ ಅನೇಕ ಅನುಭವಗಳನ್ನು ನಾನು ಪಡೆದಿದ್ದೇನೆ. ಮೂಲಸೌಕರ್ಯದ ಕೊರತೆ, ರಸ್ತೆಗಳ ದುಃಸ್ಥಿತಿ, ಪರೀಕ್ಷೆಗಳಿಗೆ ಸಂಬಂಧಿಸಿದ ವಿಚಾರಗಳು, ಯುವಜನರ ಭವಿಷ್ಯ, ಕೃತಕ ಬುದ್ಧಿಮತ್ತೆಯ ಬೆಳವಣಿಗೆ, ಶಿಕ್ಷಣಕ್ಕೆ ಸಂಬಂಧಿಸಿದ ಹಲವು ‍ಪ್ರಶ್ನೆಗಳಿವೆ. ಜನರ ಪರವಾಗಿ ಅವುಗಳಿಗೆ ಉತ್ತರ ಪಡೆಯುವುದು, ವ್ಯವಸ್ಥೆಯನ್ನು ಸರಿಪಡಿಸುವುದು ನನ್ನ ಉದ್ದೇಶ' ಎಂದೂ ದಿವ್ಯಾ ಹೇಳಿದ್ದಾರೆ.

ಐಐಟಿ ದೆಹಲಿ ಹಾಗೂ ಐಐಎಂ ಬೆಂಗಳೂರಿನ ಹಳೆಯ ವಿದ್ಯಾರ್ಥಿಯಾಗಿರುವ ದಿವ್ಯಾ ಅವರು ಐಎಎಸ್‌ ಅಧಿಕಾರಿಯಾಗಿ ಸತತ 13 ವರ್ಷಗಳು ಕೆಲಸ ಮಾಡಿದ ಬಳಿಕ ಆಗಸ್ಟ್‌ 30ರಂದು ರಾಜೀನಾಮೆ ನೀಡಿದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries