ಕಾಸರಗೋಡು: ರಾಜ್ಯ ಸರ್ಕಾರದ 100 ದಿನಗಳ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಬೇಡಡ್ಕ ಗ್ರಾಮ ಪಂಚಾಯತಿ ಮತ್ತು ವಿಮುಕ್ತಿ ಮಿಷನ್ ಬಂದಡ್ಕ ರೇಂಜ್ ಜಂಟಿಯಾಗಿ ಜಾರಿಗೊಳಿಸಿರುವ 'ರಿಲ್ಯಾಕ್ಸ್' ಯೋಜನೆಗೆ ಚಾಲನೆ ನೀಡಲಾಗಿದೆ. ಮುನ್ನಾಡ್ ಪೀಪಲ್ಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದುಮ ಶಾಸಕ ಕೆ.ನೀಲಕಂಠನ್ ಯೋಜನೆಯನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಕುಂಞÂ ರಾಮನ್ ಅಧ್ಯಕ್ಷತೆ ವಹಿಸಿದ್ದರು.
ಹೊಸದುರ್ಗ ಅಬಕಾರಿ ವೃತ್ತ ನಿರೀಕ್ಷಕ ವಿ.ವಿ. ಪ್ರಸನ್ನಕುಮಾರ್ ಮುಖ್ಯ ಅತಿಥಿಯಾಗಿದ್ದರು. ವಿಮುಕ್ತಿ ಜಿಲ್ಲಾ ಸಂಯೋಜಕ ಕೆ.ಎಂ. ಸ್ನೇಹಾ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಧಾರವಿ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಲತಾ ಗೋಪಿ, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೃಷ್ಣವೇಣಿ, ಪಂಚಾಯಿತಿ ಸದಸ್ಯೆ ಕೆ.ಉಮಾವತಿ, ಕೆ.ಎಸ್.ಇ.ಎಸ್.ಎ. (ಕೆಎಸ್ ಇಎಸ್ ಎ) ಜಿಲ್ಲಾ ಕಾರ್ಯದರ್ಶಿ ನೌಷಾದ್, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಇ.ಮೋಹನನ್, ಇ.ಕುಂಞÂ ಕೃಷ್ಣನ್ ನಾಯರ್ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಿ.ಜಿತು ಜಾನ್, ಕಾಲೇಜು ಎನ್.ಎಸ್.ಎಸ್. ಸಂಯೋಜಕ ಸುರೇಶ್ ಪಯ್ಯಂಗಾನಂ ಮತ್ತಿತರರು ಮಾತನಾಡಿ ಶುಭಹಾರೈಸಿದರು.



