ನವದೆಹಲಿ (PTI): ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಮುನ್ನೋಟ ಅತ್ಯಂತ ಬಲಿಷ್ಠವಾಗಿರುವ ದೇಶ ಭಾರತ ಎಂದು ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ಪ್ರಕಟಿಸಿರುವ ಸಮೀಕ್ಷೆಯೊಂದು ಹೇಳಿದೆ.
ಆದರೆ, ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಆಗುವಂತಹ ವಾತಾವರಣ ಇರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಈ ಬಾರಿ ನಾಲ್ಕನೆಯ ಸ್ಥಾನಕ್ಕೆ ಇಳಿದಿದೆ.
ಈ ಪಟ್ಟಿಯಲ್ಲಿ ಭಾರತವು ಮೇ ತಿಂಗಳಲ್ಲಿ ಎರಡನೆಯ ಸ್ಥಾನದಲ್ಲಿತ್ತು. 'ಮುಖ್ಯ ಅರ್ಥಶಾಸ್ತ್ರಜ್ಞರ ಮುನ್ನೋಟ' ಹೆಸರಿನ ಸಮೀಕ್ಷಾ ವರದಿಯಲ್ಲಿ ಹೇಳಿರುವಂತೆ, ಮುಖ್ಯ ಅರ್ಥಶಾಸ್ತ್ರಜ್ಞರ ಪೈಕಿ ಬಹುಪಾಲು (ಶೇ 56ರಷ್ಟು) ಮಂದಿಯ ಪ್ರಕಾರ ಜಾಗತಿಕ ಆರ್ಥಿಕತೆಯಲ್ಲಿ ಸ್ಥಿರತೆ ಬರಲಿದೆ ಅಥವಾ ಸುಧಾರಣೆ ಆಗಲಿದೆ. ಮೇ ತಿಂಗಳಲ್ಲಿ ಶೇ 89ರಷ್ಟು ಮಂದಿ, ಜಾಗತಿಕ ಆರ್ಥಿಕತೆ ದುರ್ಬಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದರು. ಪ್ರಪಂಚದ ವಿವಿಧೆಡೆಗಳಲ್ಲಿ ಇರುವ ಅರ್ಥಶಾಸ್ತ್ರಜ್ಞರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. ಅವರ ಪೈಕಿ ಶೇ 98ರಷ್ಟು ಮಂದಿ, ಮುಂದಿನ 12 ತಿಂಗಳಲ್ಲಿ ಭಾರತದ ಆರ್ಥಿಕತೆಯು ಮಧ್ಯಮಗತಿಯ ಅಥವಾ ವೇಗವಾದ ಬೆಳವಣಿಗೆಯನ್ನು ಸಾಧಿಸಲಿದೆ.

