ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಟ್ಟದ ಕ್ರೀಡಾಕೂಟ ವಿವಿಧ ಕ್ರೀಡಾ ಸ್ಪರ್ಧೆಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಮಂಗಲ್ಪಾಡಿ ಪಂಚಾಯಿತಿ ಸದಸ್ಯೆ ನಾಜಿಯಾ ಅಜೀಜ್ ಕ್ರೀಡಾಕೂಟದ ಮ್ಯಾರಥಾನ್ ಉದ್ಘಾಟಿಸಿ ಸೌಹಾರ್ದ ಸಮಾಜದ ನಿರ್ಮಾಣ ಜೊತೆಗೆ ನಮ್ಮನ್ನು ದೈಹಿಕವಾಗಿ. ಮಾನಸಿಕವಾಗಿಯೂ ಕ್ರೀಡೆಗಳು ಬಲಿಷ್ಠಗೊಳಿಸುತ್ತದೆ ಎಂದರು. ಕ್ರೀಡೆಯು ಆರೋಗ್ಯಕರವಾಗಿ ನಡೆದು ಉತ್ತಮ ಕ್ರೀಡಾಪಟುಗಳ ಸೃಷ್ಟಿಯಾಗಲೆಂದು ಶಾಲಾ ಪಿ.ಟಿ.ಎ ಅಧ್ಯಕ್ಷ ಇಬ್ರಾಹಿಂ ಹನೀಫಿ ಶುಭ ಹಾರೈಸಿದರು.
ಬಳಿಕ ನಡೆದ ಕ್ರೀಡೋತ್ಸವ ಶಾಲಾ ಧ್ವಜವನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಅವರು ಉಪ್ಪಳದ ಹಿದಾಯತ್ ನಗರದ ಹೊಮಿಯೋಪತಿ ಕೇಂದ್ರದ ಯೋಗ ತರಬೇತುದಾರ ತಾರಾ ಅವರ ಉಪಸ್ಥಿತಿಯಲ್ಲಿ ಧ್ವಜಾರೋಹಣಗೈಯ್ದರು. ಇದೇ ಸಂದರ್ಭದಲ್ಲಿ ಕ್ರೀಡಾ ಪ್ರತಿಜ್ಞೆ ಸ್ವೀಕಾರವು ಆಯಿಷಾತ್ ಸೈನಜ್ ಅವರ ನೇತೃತ್ವದಲ್ಲಿ ನಡೆಯಿತು. ಶಿಕ್ಷಕ ಅಬ್ದುಲ್ ಬಷೀರ್ ಸ್ವಾಗತಿಸಿ, ಶಿಕ್ಷಕಿ ಐಶ್ವರ್ಯ ವಂದಿಸಿದರು. ರಿಯಾಜ್ ಪೆರಿಂಗಡಿ ಕಾರ್ಯಕ್ರಮ ನಿರ್ವಹಿಸಿದರು.
ವಿದ್ಯಾರ್ಥಿಗಳ ಸ್ಪರ್ಧೆ ನಡೆಸಲಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭ ಮಂಜೇಶ್ವರ ಬಿ.ಆರ್.ಸಿಯ ತೆರಬೇತುದಾರೆ ಸುಮಯ್ಯ, ಹಾಗೂ ಸಿಬಂದಿಗಳಾದ ಸುಜಿತ್ ಮತ್ತು ಸಜಿನ್ ಅವರ ಉಪಸ್ಥಿತಿಯಲ್ಲಿ ನೆರವೇರಿತು. ಜಯಶಾಲಿಯಾದ ನೀಲಿ ತಂಡಕ್ಕೆ ವಿನ್ನರ್ ಟ್ರೋಫಿಯನ್ನು ಶಿಕ್ಷಕಿ ಐಷತ್ ಸೈನಾಝ್ ಮತ್ತು ತಂಡದ ಎಲ್ಲಾ ಸದಸ್ಯರಿಗೆ, ಹಾಗೂ ಹಳದಿ ತಂಡಕ್ಕೆ ರನ್ನರ್ ಟ್ರೋಫಿಯನ್ನು ಹಳದಿ, ತಂಡದ ಕ್ಯಾಪ್ಟನ್ ಶಿಕ್ಷಕಿ ರೇಷ್ಮಾ ಮತ್ತು ಅವರ ತಂಡದ ಸದಸ್ಯರಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಅವರು ನೀಡಿದರು. ಅಧ್ಯಾಪಕ ಸಿರಾಜುದ್ದೀನ್. ಪಿ., ಶಾಲಾ ಯಸ್.ಎಂ.ಸಿ ಸದಸ್ಯರಾದ ತಾಹಿರ, ಹನೀಫ್, ಪ್ರಜಿತ, ಜಯಂತಿ ಮೊದಲಾದವರು ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಶಿಕ್ಷಕ ಅಬ್ದುಲ್ ಬಶೀರ್ ಅವರ ನೇತೃತ್ವದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಜಸೀಲ ಟೀಚರ್ ಸ್ವಾಗತಿಸಿ ಧನ್ಯ ವಂದಿಸಿದರು.

.jpg)
.jpg)
