ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯಿತಿಯ 2026-27ನೇ ವಾರ್ಷಿಕ ಯೋಜನೆಯಲ್ಲಿ ಒಳಪಡಿಸಿರುವ ಮೊಟ್ಟೆ ಕೋಳಿ ವಿತರಣೆಯು ಮಂಗಳವಾರ ಬೆಳಗ್ಗೆ ಮೃಗ ಆಸ್ಪತ್ರೆ ಪರಿಸರದಲ್ಲಿ ನಡೆಯಿತು.
ಯೋಜನೆಯ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಾ ಎನ್. ನಿರ್ವಹಿಸಿದರು. ಈ ಸಂದರ್ಭದಲ್ಲಿ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಎ.ಸಿ., ಪಂಚಾಯಿತಿ ಸದಸ್ಯರುಗಳಾದ ಕೊರಗಪ್ಪ ಬೆಳ್ಳಿಗೆ, ಎಸ್. ಮೊಹಮ್ಮದ್ ಕುಂಞÂ, ನೂರುದ್ದೀನ್, ಪಶು ವೈದ್ಯಾಧಿಕಾರಿ ಡಾ. ಶೀಲಾ, ವಿವಿಧ ವಾರ್ಡುಗಳ ಫಲಾನುಭವಿಗಳು ಭಾಗವಹಿಸಿದ್ದರು. ಪ್ರತಿಯೊಬ್ಬ ಪಲಾನುಭವಿಗಳಿಗೆ 45 ದಿನಗಳ ಪ್ರಾಯದ ಐದು ಮೊಟ್ಟೆ ಕೋಳಿಗಳು ಹಾಗೂ ಅದಕ್ಕಿರುವ ಆಹಾರ ವಿತರಿಸಲಾಯಿತು.

.jpg)
