ಬದಿಯಡ್ಕ: ಬದಿಯಡ್ಕ ವಲಯದಲ್ಲಿ ಭಜನಾ ಪರಿಷತ್‍ನ ನೂತನ ವಲಯ ಸಮಿತಿಯನ್ನು ಬದಿಯಡ್ಕ ಸಂಸ್ಕøತಿ ಭವನದಲ್ಲಿ ರೂಪೀಕರಿಸಲಾಯಿತು. ವಲಯದ ಭಜನಾ ಮಂಡಳಿಗಳ ಪದಾಧಿಕಾರಿಗಳ ಸಭೆಯನ್ನು ತಾಲೂಕು ಭಜನಾ ಪರಿಷತ್ ನ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ ಉದ್ಘಾಟಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಭಜನಾ ಪರಿಷತ್ ನ ಸಂಯೋಜಕ ಸಂತೋಷ ಕುಮಾರ್ ಅವರು ಧರ್ಮಸ್ಥಳ ಭಜನಾ ಪರಿಷತ್‍ನ ಮೂಲಕ ನಡೆಯುವ ಕಾರ್ಯ ಚಟುವಟಿಗಳ ಬಗ್ಗೆ ಮಾಹಿತಿ ನೀಡಿ, ಭಜನಾ ಕಮ್ಮಟ ಮತ್ತು ಭಜನಾ ಮಂಗಳೋತ್ಸವದಲ್ಲಿ ಪಾಲ್ಗೊಳ್ಳುವ ಬಗ್ಗೆ ಮಾಹಿತಿ ನೀಡಿದರು. ವಲಯ ಸಮಿತಿಯ ರಚನೆ ಮಾಡಿದ್ದು ವಲಯದ ಭಜನಾ ಪರಿಷತ್ ಅಧ್ಯಕ್ಷರಾಗಿ ಸಿಂಧೂ, ಉಪಾಧ್ಯಕ್ಷರಾಗಿ ಹರೀಶ್, ಪದ್ಮಾವತಿ, ಕಾರ್ಯದರ್ಶಿಯಾಗಿ ಹರಿಣಾಕ್ಷಿ, ಜೊತೆ ಕಾರ್ಯದರ್ಶಿಯಾಗಿ ಆಶಾ ಟೀಚರ್ ಕೋಶಾಕಾರಿಯಾಗಿ ರಮೇಶ್ ಅವರನ್ನು ಆಯ್ಕೆ ಮಾಡಲಾಯಿತು. ತಾಲೂಕು ಯೋಜನಾಧಿಕಾರಿ ದಿನೇಶ್ ಉಪಸ್ಥಿತರಿದ್ದರು. ಮೇಲ್ವಿಚಾರಕ ಮೋನಪ್ಪ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿಗಳಾದ ಜಲಜಾಕ್ಷಿ ಸ್ವಾಗತಿಸಿ, ಬೇಬಿ ವಂದಿಸಿದರು.

.jpg)
