ಪೆರ್ಲ: ಬೆದ್ರಂಪಳ್ಳದ ಮೊಹಮ್ಮದ್ ಸಿರಾಜ್ ಬಿ. ಅವರಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(ಎಐ)ಇಂಜಿನಿಯರಿಂಗ್ ರಿಸರ್ಚ್‍ನಲ್ಲಿ ಡಾಕ್ಟರೇಟ್ (ಪಿಎಚ್.ಡಿ.) ಲಭಿಸಿದೆ. ಬೆಳಗಾವಿಯ ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯೂನಿವರ್ಸಿಟಿಯಿಂದ (ವಿಟಿಯು) ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಇವರು ಈ ಪದವಿ ಪಡೆದುಕೊಂಡಿದ್ದಾರೆ.
ವಿಟಿಯು ಅಫಿಲಿಯೇಟೆಡ್ ಮಂಗಳೂರಿನ ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಡಿಪಾರ್ಟ್‍ಮೆಂಟ್ ಪೆÇ್ರಫೆಸರ್ ಡಾ. ಝಾಹಿದ್ ಅಹ್ಮದ್ ಅನ್ಸಾರಿ ಅವರ ಗೈಡೆನ್ಸ್‍ನಲ್ಲಿ ಇವರು ಸಂಶೋಧನೆ ಪೂರ್ಣಗೊಳಿಸಿದ್ದಾರೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಕಂಪ್ಯೂಟರ್ ವಿಷನ್ ತಂತ್ರಜ್ಞಾನವನ್ನು ಬಳಸಿ ಸಿದ್ಧಪಡಿಸಿದ "ಪ್ಯಾರಲಲ್ ಡೀಪ್ ಕನ್ವಲ್ಯೂಷನಲ್ ನ್ಯೂರಲ್ ನೆಟ್‍ವರ್ಕ್ ಬೇಸ್ಡ್ ಮೈನಿಂಗ್ ಆಫ್ ಅಗ್ರಿಕಲ್ಚರಲ್ ಡೇಟಾ ಫಾರ್ ಕ್ವಾಲಿಟಿ ಜಡ್ಜ್‍ಮೆಂಟ್ ಆಂಡ್ ಐಡೆಂಟಿಫಿಕೇಷನ್ ಆಫ್ ಡಿಫೆಕ್ಟ್ಸ್ ಇನ್ ಪ್ಲಾಂಟ್ಸ್" ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ. ಸೆಂಟ್ರಲ್ ಗವರ್ನಮೆಂಟ್‍ನ ಯುಜಿಸಿ ಮೌಲಾನಾ ಆಜಾದ್ ನ್ಯಾಷನಲ್ ಫೆಲೋಶಿಪ್ (ಜೆಆರ್‍ಎಫ್ & ಎಸ್‍ಆರ್‍ಎಫ್) ನೊಂದಿಗೆ ಇವರು ಈ ರಿಸರ್ಚ್ ಪೂರ್ಣಗೊಳಿಸಿದ್ದಾರೆ.
ಇನ್ಫಾರ್ಮೇಶನ್ ಸೈನ್ಸ್ ಮತ್ತು ಇಂಜಿನಿಯರಿಂಗ್‍ನಲ್ಲಿ ಬಿ.ಇ. ಹಾಗೂ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‍ನಲ್ಲಿ ಎಂ.ಟೆಕ್ ಪದವಿ ಪಡೆದಿರುವ ಇವರು, ಪ್ರಸಕ್ತ ಮಂಗಳೂರಿನ ಸೈಂಟ್ ಅಲೋಶಿಯಸ್ ಸ್ಕೂಲ್ ಆಫ್ ಇಂಜಿನಿಯರಿಂಗ್‍ನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲನಿರ್ಂಗ್ ವಿಭಾಗದಲ್ಲಿಸಹಾಯಕ ಪರಾಧ್ಯಾಪಕರಾಗಿ ಮತ್ತು ಇನ್‍ಸ್ಟಿಟ್ಯೂಷನ್ಸ್ ಇನ್ನೋವೇಶನ್ ಕೌನ್ಸಿಲ್ ಚೇರ್‍ಪರ್ಸನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.



