HEALTH TIPS

ಅಮೆರಿಕದೊಂದಿಗೆ ಸಂಘರ್ಷ ಮುಂದುವರಿಸಲು ಇರಾನ್‍ಗೆ ಆಸಕ್ತಿಯಿಲ್ಲ: ಅಬ್ಬಾಸ್ ಅರಾಘ್ಚಿ

ಬೀಜಿಂಗ್: ಅಮೆರಿಕದೊಂದಿಗೆ ಸಂಘರ್ಷವನ್ನು ಮುಂದುವರಿಸಲು ಇರಾನ್ ಆಸಕ್ತಿ ಹೊಂದಿಲ್ಲ ಮತ್ತು ರಾಜತಾಂತ್ರಿಕ ಪರಿಹಾರಕ್ಕೆ ಮರಳಲು ಸಿದ್ಧವಾಗಿದೆ ಎಂದು ಇರಾನ್‍ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಬುಧವಾರ ಹೇಳಿದರು.


ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಮಾತುಕತೆ ನಡೆಸಿದ ಅರಾಘ್ಚಿ ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಭಾಗದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಾಂಗ್ ಅವರೊಂದಿಗೆ ಚರ್ಚಿಸಿದರು. 

ಸಂಘರ್ಷವನ್ನು ಮುಂದುವರಿಸಲು ಇರಾನ್ ಆಸಕ್ತಿ ಹೊಂದಿಲ್ಲ. ತನ್ನ ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಜೊತೆಗೆ ರಾಜತಾಂತ್ರಿಕ ಮಾರ್ಗಗಳಿಗೆ ಮರಳಲು ಸಿದ್ಧವಾಗಿದೆ ಎಂದು ತಿಳಿಸಿದರು.

ಅಮೆರಿಕ-ಇರಾನ್ ತಿಳುವಳಿಕೆ ಒಪ್ಪಂದ (ಎಂಒಐ) ಇನ್ನೂ ಜಾರಿಯಲ್ಲಿದೆ ಎಂದು ಇರಾನ್ ಪರಿಗಣಿಸಿದೆ ಮತ್ತು ಹಾರ್ಮುಝ್ ಜಲಸಂಧಿಯನ್ನು ಸಕ್ರಿಯಗೊಳಿಸುವ, ಮರುತೆರೆಯುವ ವ್ಯವಸ್ಥೆಗಳ ಕುರಿತು ಒಮಾನ್‍ನೊಂದಿಗೆ ಒಪ್ಪಂದಕ್ಕೆ ಬಂದಿದೆ. ಪ್ರಾದೇಶಿಕ ದೇಶಗಳೊಂದಿಗೆ ಉತ್ತಮ ನೆರೆಹೊರೆಯ ಬಾಂಧವ್ಯವನ್ನು ಸ್ಥಾಪಿಸಲು ಮತ್ತು ಪ್ರದೇಶದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲು ಇರಾನ್ ಸಿದ್ಧವಾಗಿದೆ ಎಂದು ಅರಾಘ್ಚಿ ಹೇಳಿದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries