HEALTH TIPS

ವಿದೇಶದ ಏಳು ಪ್ರಜೆಗಳ ವಿರುದ್ಧ ಎನ್‌ಐಎ ಆರೋಪಪಟ್ಟಿ ಸಲ್ಲಿಕೆ

ನವದೆಹಲಿ (PTI): ಭಾರತದಲ್ಲಿ ಭಯೋತ್ಪಾದನೆಗೆ ಸಂಚು ರೂಪಿಸಿದ ಆರೋಪದಲ್ಲಿ ಬಂಧಿತರಾಗಿರುವ ಅಮೆರಿಕದ ಮ್ಯಾಥ್ಯೂ ಆಯರನ್‌ ವ್ಯಾನ್‌ ಡೈಕ್‌ ಸೇರಿದಂತೆ ವಿದೇಶದ ಏಳು ಪ್ರಜೆಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಆರೋಪಪಟ್ಟಿ ಸಲ್ಲಿಸಿದೆ.


ಅಕ್ರಮ ಪ್ರವೇಶ, ವಾಸ್ತವ್ಯ ಮತ್ತು ಅನುಮತಿಯಿಲ್ಲದೆ ಪ್ರಯಾಣಿಸಿದ ಆರೋಪಗಳನ್ನು ಹೊರಿಸಲಾಗಿದೆ.

ಆದರೆ 'ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ' (ಯುಎಪಿಎ) ಅಡಿಯಲ್ಲಿ ಇವರ ವಿರುದ್ಧ ಯಾವುದೇ ಆರೋಪ ಹೊರಿಸಲಾಗಿಲ್ಲ.

ವಿಶೇಷ ನ್ಯಾಯಾಧೀಶ ಪ್ರಶಾಂತ್ ಶರ್ಮಾ ಅವರಿಗೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ, ಏಳು ಮಂದಿಯ ವಿರುದ್ಧ ವಲಸೆ ಮತ್ತು ವಿದೇಶಿಯರ ಕಾಯ್ದೆಯ ಸೆಕ್ಷನ್ 21 ಮತ್ತು 23ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. 'ಯುಎಪಿಎ ಕಾಯ್ದೆಯಡಿಯಲ್ಲಿ ಅಪರಾಧ ಎಸಗಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಹೆಚ್ಚಿನ ಸಮಯ ಅಗತ್ಯವಿದೆ' ಎಂದು ಎನ್‌ಐಎ ಹೇಳಿದೆ.

ವ್ಯಾನ್‌ ಡೈಕ್‌ ಅವರನ್ನು ಎನ್‌ಐಎ ಅಧಿಕಾರಿಗಳು ಮಾರ್ಚ್‌ 13ರಂದು ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರೆ, ಉಕ್ರೇನ್‌ನ ಮೂವರು ಪ್ರಜೆಗಳನ್ನು ಲಖನೌ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಉಕ್ರೇನ್‌ನ ಇನ್ನೂ ಮೂವರನ್ನು ಅದೇ ದಿನ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

'ಈ ಏಳು ಮಂದಿ ಅಗತ್ಯ ಪ್ರಯಾಣ ದಾಖಲೆಗಳೊಂದಿಗೆ 2025ರ ಡಿಸೆಂಬರ್‌ನಲ್ಲಿ ಭಾರತ ಪ್ರವೇಶಿಸಿದ್ದರು ಎಂಬುದು ತನಿಖೆಯ ವೇಳೆ ದೃಢಪಟ್ಟಿದೆ. ಆದರೆ ಮಿಜೋರಾಂಗೆ ಭೇಟಿ ನೀಡಲು ಕಡ್ಡಾಯವಾಗಿ ಪಡೆಯಬೇಕಿದ್ದ ಅನುಮತಿ ಪಡೆದಿರಲಿಲ್ಲ' ಎಂದು ಎನ್‌ಐಎ ಹೇಳಿದೆ.

'ಮ್ಯಾನ್ಮಾರ್‌ನ ಜನಾಂಗೀಯ ಸಶಸ್ತ್ರ ಗುಂಪುಗಳಿಗೆ ಡ್ರೋನ್ ಯುದ್ಧತಂತ್ರದ ಕುರಿತು ತರಬೇತಿ ನೀಡಲು ಇವರು ಅಗತ್ಯ ಪ್ರಯಾಣ ದಾಖಲೆಗಳಿಲ್ಲದೆ ಮಿಜೋರಾಂ ಮೂಲಕ 2025ರ ಡಿಸೆಂಬರ್‌ ಅಂತ್ಯದಲ್ಲಿ ಆ ದೇಶಕ್ಕೆ ಪ್ರವೇಶಿಸಿದ್ದು ಹಾಗೂ 2026ರ ಮಾರ್ಚ್‌ನಲ್ಲಿ ಅಕ್ರಮವಾಗಿ ಭಾರತಕ್ಕೆ ಮರಳಿರುವುದು ತನಿಖೆಯಿಂದ ಬಹಿರಂಗಗೊಂಡಿದೆ' ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries