HEALTH TIPS

ದೆಹಲಿ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ರಾಕೇಶ್ ಮೆಹ್ತಾ ಆತ್ಮಹತ್ಯೆ

ನವದೆಹಲಿ: ದೆಹಲಿ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ರಾಕೇಶ್ ಮೆಹ್ತಾ (74) ಅವರು ನೋಯ್ಡಾದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಘಟನಾ ಸ್ಥಳದಲ್ಲಿ ಪೋಲಿಸರಿಗೆ ಮರಣ ಪತ್ರ ದೊರೆತಿದ್ದು, ತಮ್ಮ ಈ ನಿರ್ಧಾರಕ್ಕೆ ಅನಾರೋಗ್ಯ ಹಾಗೂ ಮಾನಸಿಕ ಸಮಸ್ಯೆಗಳೇ ಕಾರಣ ಎಂದು ಮೆಹ್ತಾ ತಿಳಿಸಿದ್ದಾರೆ.

ಸೆಪ್ಟೆಂಬರ್ 6ರಂದು ಅವರ ಮೃತದೇಹ ಪತ್ತೆಯಾಗಿತ್ತು.

1975ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದ ಮೆಹ್ತಾ ಅವರು ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಆಡಳಿತಾವಧಿಯಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದರು.

ದೆಹಲಿ ಪಾಲಿಕೆ (MCD) ಆಯುಕ್ತರಾಗಿ ಹಾಗೂ ಸರ್ಕಾರದ ವಿವಿಧ ಹಂತದ ಉನ್ನತ ಹುದ್ದೆಗಳನ್ನು ಅವರು ನಿರ್ವಹಿಸಿದ್ದರು. 2007ರಲ್ಲಿ ದೆಹಲಿಯ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಮೆಹ್ತಾ, ಮೂರು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ಇವರ ಅಧಿಕಾರಾವಧಿಯಲ್ಲೇ ದೆಹಲಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು

(ಯಾರಿಗಾದರೂ ಖಿನ್ನತೆ ಇದ್ದರೆ ಇಲ್ಲವೆ ಆತ್ಮಹತ್ಯೆಯ ಮನೋಭಾವ ಕಾಡುತ್ತಿದ್ದರೆ ಈ ಕೆಳಗಿನ ಸಹಾಯವಾಣಿ ಸಂಪರ್ಕಿಸಿ: ಟೆಲಿಮನಸ್‌-14416 ಅಥವಾ ಸಹಾಯ್‌- 080 25497777, 98864 44075) 260909-4-2025923811






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries