ಬದಿಯಡ್ಕ: ಪುತ್ತಿಗೆ ಪಂಚಾಯಿತಿಯ ಸೀತಾಂಗೋಳಿ ಸನಿಹದ ಪೆರ್ಣೆ ಆಸುಪಾಸು ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ನಿರತವಾಗಿರುವ ಶ್ರೀ ಭಗವತೀ ಫ್ರೆಂಡ್ಸ್ ಪೆರ್ಣೆ ಸದಸ್ಯರು ಈ ವರ್ಷದ ಗಣೇಶೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸುವ ಸಂಕಲ್ಪ ಮಾಡಿ ಉಳಿಕೆ ಹಣವನ್ನು ಸಾಮಾಜಿಕ ಚಟುವಟಿಕೆಗೆ ಬಳಸು ತೀರ್ಮಾನಿಸಿದ್ದಾರೆ.
ಈ ನಿಟ್ಟಿನಲ್ಲಿ ಕನ್ಯಪ್ಪಾಡಿಯಲ್ಲಿರುವ 'ಆಶ್ರಯ' ಆಶ್ರಮಕ್ಕೆ ರೂ. 10,000 ಮೊತ್ತವನ್ನು ದೇಣಿಗೆಯಾಗಿ ನೀಡುವ ಮೂಲಕ ಆದರ್ಶ ಮೆರೆದಿದ್ದಾರೆ. ಧನಸಹಾಯ ಹಸ್ತಾಂತರ ಸಂದರ್ಭ ಭಗವತೀ ಫ್ರೆಂಡ್ಸ್ ಪ್ರಮುಖರಾದ ರವಿನಾರಾಯಣ ಗುಣಾಜೆ, ತಿರುಮಲೇಶ್ ಪೆರ್ಣೆ, ಅಕ್ಷಯ್ ಪೆರ್ಣೆ, ಆಶ್ರಮದ ಪ್ರಮುಖರಾದ ರಾಮಕೃಷ್ಣ ಹೆಬ್ಬಾರ್, ಹರೀಶ್ ಮೊದಲಾದವರು ಉಪಸ್ಥಿತರಿದ್ದರು. ಧನಸಹಾಯದ ಮೊತ್ತವನ್ನು ಆಶ್ರಮ ಸನಿತಿ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯತು.



