ಸಮರಸ ಚಿತ್ರಸುದ್ದಿ: ಮಧೂರು: ಬಿಹಾರ ರಾಜ್ಯದ ಆಹಾರ ಮತ್ತು ಗ್ರಾಹಕ ಹಿತರಕ್ಷಣಾ ಖಾತೆ ಸಚಿವ ಅಶೋಕ್ ಚೌಧರಿ ಅವರು ಗುರುವಾರ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕಕೆ ಕುಟುಂಬ ಸಮೇತರಾಗಿ ಭೇಟಿನೀಡಿ, ಶ್ರೀದೇವರ ದರ್ಶನದೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಬಿಜೆಪಿ ನೇತಾರರೂ ಜತೆಗಿದ್ದರು. ಸಚಿವರ ಭೇಟಿ ಹಿನ್ನೆಲೆಯಲ್ಲಿ ದೇವಾಲಯ ಆಸುಪಾಸು ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ದೇಸ್ಥಾನ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಅವರು ಸಚಿವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.


