ಸಮರಸ ಚಿತ್ರಸುದ್ದಿ: ಬದಿಯಡ್ಕ: ಕುಂದಾಪುರ ತಾಲೂಕು ಬಸ್ರೂರು ಕಂದಾವರ ಗ್ರಾಮದ ಕಾಡಿನಕೊಂಡ ಶ್ರೀ ವಿನಾಯಕ ದೇವಸ್ಥಾನ ಪ್ರಧಾನ ಅರ್ಚಕ ಶ್ರೀ ಸುಬ್ರಾಯ ಪುರಾಣಿಕ, ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರು ಹಾಗೂ ಭಕ್ತವೃಂದದವರು ಶ್ರೀ ಎಡನೀರು ಮಠಕ್ಕೆ ಆಗಮಿಸಿ ಹೊರೆ ಕಾಣಿಕೆ ಸಮರ್ಪಿಸಿ, ಚಾತುರ್ಮಾಸ್ಯ ವೃತಾಚರಣೆಯಲ್ಲಿರುವ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆಶೀರ್ವಾದ ಪಡೆದುಕೊಂಡರು.


