HEALTH TIPS

ಕೊಂಡೆವೂರು ಮಠದಲ್ಲಿ ಲೋಕ ಕಲ್ಯಾಣಾರ್ಥ ಧನ್ವಂತರೀ ಹವನ

ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಪೂಜ್ಯ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವೇದಮೂರ್ತಿ ಹರಿನಾರಾಯಣ ಮಯ್ಯ ಕುಂಬಳೆ ಇವರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥ ಧನ್ವಂತರೀ ಹವನ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಇದೇ ಸಂದರ್ಭದಲ್ಲಿ ಬೆಂಗಳೂರಿನ   ಉದ್ಯಮಿ ಶ್ರೀನಿವಾಸ ನಾಯ್ಡು ಅವರು ನವೀಕೃತ ಅಂಗಣವನ್ನು ಲೋಕಾರ್ಪಣೆಗೈದರು. 


ಪೂಜ್ಯ ಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದ ಶಬರಿಮಲೆ ತಂತ್ರಿ ಬ್ರಹ್ಮಶ್ರೀ ಕಂಠಾರರ್ ಮಹೇಶ್ ಮೋಹನಾರ್ ಧಾರ್ಮಿಕ ಕ್ಷೇತ್ರಗಳು ಸಾಮಾಜಿಕವಾಗಿ ಹೇಗಿರಬೇಕೆಂಬುದಕ್ಕೆ ಕೊಂಡೆವೂರು ಮಠ ಮಾದರಿಯಾಗಿದೆ ಎಂದು ನುಡಿದರು. ಎರ್ನಾಕುಳಂನ ಆಲುವ ತಂತ್ರಾ ವಿದ್ಯಾಪೀಠದ ಅಧ್ಯಕ್ಷ ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ ಬೆಂಗಳೂರಿನ ಕೆ. ನಾರಾಯಣg ಅವರು ನವೀಕರಣಗೊಳ್ಳಲಿರುವ ಶ್ರೀ ಗಾಯತ್ರೀ ಮಾತೆಯ ಗರ್ಭಗುಡಿಯ ವಿಜ್ಞಾಪಣಾ ಪತ್ರವನ್ನು ಬಿಡುಗಡೆಗೊಳಿಸಿದರು. ಬಳಿಕ   ಶ್ರೀನಿವಾಸ ನಾಯ್ಡು ಮತ್ತು ಶ್ರೀ ಮಠದ ಶಾಲೆಗೆ ಬಸ್ ನೀಡಿದ ಕರ್ಣಾಟಕ ಬ್ಯಾಂಕ್ ನ ಮಹಾ ಪ್ರಬಂಧಕ ವಿನಯ ಭಟ್ ಅವರನ್ನು ಶ್ರೀಗಳವರು ಸನ್ಮಾನಿಸಿದರು. 2026 ರ ಝಿ ಟೀವಿಯ ಸ ರಿ ಗ ಮ ಪ ದ ಲಿಟಲ್ ಚಾಂಪಿಯನ್ ಮಂಗಳೂರಿನ ಅಶ್ಮಿತ್ ಎ.ಜೆ. ಅವರನ್ನು ಸನ್ಮಾನಿಸಲಾಯಿತು. ಆಶ್ರಮದ ಆಶ್ರಯ ಯೋಜನೆಯಡಿಯಲ್ಲಿ ನಿರ್ಮಿಸಿದ 48 ನೇ ಮನೆಯ ಕೀಲಿ ಕೈಯನ್ನು Àದಾಶಿವ ಶೆಟ್ಟಿ ಕುಳೂರು ಕನ್ಯಾನ  ಫಲಾನುಭವಿ ಸಜಿತಾರಿಗೆ ಹಸ್ತಾಂತರಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಾರಾಯಣ ಬೆಂಗಳೂರು ಅವರು ಆಶ್ರಮದ ಚಟುವಟಿಕೆಗಳಲ್ಲಿ ನಾವೆಲ್ಲಾ ಕೈ ಜೋಡಿಸಬೇಕೆಂದು ಕರೆನೀಡಿದರು. .ಆಶ್ರಮದ ಟ್ರಸ್ಟಿ ಗಳಾದ ಮೋನಪ್ಪ ಭಂಡಾರಿ ಮತ್ತು ಶಶಿಧರ ಶೆಟ್ಟಿ ಗ್ರಾಮ ಚಾವಡಿಯವರು ಅಥಿತಿಗಳಾಗಿ ಉಪಸ್ಥಿತರಿದ್ದರು ಅಧ್ಯಕ್ಷತೆ ವಹಿಸದ್ದ ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನರವರು ಉತ್ತಮ ಕೆಲಸ ಗೈದು ಆಶ್ರಮದ ಬೆಳವಣಿಗೆಯಲ್ಲಿ ಕೈ ಜೋಡಿಸಿದ ಮುಖ್ಯ ಅತಿಥಿಗಳನ್ನು ಅಭಿನಂದಿಸಿ ಮಠವನ್ನು ಇನ್ನಷ್ಟು ಬೆಳೆಸೋಣ ಎಂದು ಕರೆ ನೀಡಿದರು. ಶ್ರೀಗಳವರು ತಮ್ಮ ಆಶೀರ್ವಚನದಲ್ಲಿ ಭಗವಂತನ ಆರಾಧನೆಯನ್ನು ಜನಸೇವೆಯೇ ಜನಾರ್ದನ ಸೇವೆ ಎಂದು ಒಳ್ಳೆ ಕೆಲಸಗಳೊಂದಿಗೆ ಹೃದಯವಂತರಾಗಿ ಬಾಳೋಣ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಮಧುಸೂದನ್ ಆಯರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಅಶ್ಮಿತ್ ಎ.ಜೆ. ಪ್ರಾರ್ಥನೆಗೈಸದರು. ದಿನಕರ್ ಹೊಸಂಗಡಿ ವಂದಿಸಿದರು. ಶೈಲೇಶ್ ಮತ್ತು  ಪ್ರಶಾಂತ್ ತೋಳಂಬರಮ್ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries