HEALTH TIPS

ಅಂಗಡಿಮೊಗರು ಶಾಲಾ 'ಪೌಷ್ಠಿಕ ತೋಟ' ದಲ್ಲಿ ಬೆಂಡೆಕಾಯಿ ಕೊಯ್ಲು ಉತ್ಸವದ ಸಂಭ್ರಮ

ಕುಂಬಳೆ: ಶಾಲಾ ಅಂಗಳದಲ್ಲಿ ತರಕಾರಿ ಕೃಷಿ ಯೋಜನೆಯನ್ವಯ ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 'ಪೌಷ್ಟಿಕ ತೋಟ'ದಲ್ಲಿ ಬೆಳೆಸಿದ ಬೆಂಡೆಕಾಯಿ ಬೆಳೆಯ ಕೊಯ್ಲು ಉತ್ಸವ ಮಂಗಳವಾರ ನಡೆಯಿತು. 


ಪುತ್ತಿಗೆ ಗ್ರಾಮ ಪಂಚಾಯಿತಿ ಸದಸ್ಯ ಶಿವಪ್ಪ ರೈ ಅವರು ಬೆಂಡೆಕಾಯಿ ಕೊಯ್ಯುವ ಮೂಲಕ ಕೊಯ್ಲುಉತ್ಸವಕ್ಕೆ  ಚಾಲನೆ ನೀಡಿದರು. ಶಾಲೆಯ ಪೌಷ್ಟಿಕ ತೋಟದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಹಯೋಗದಲ್ಲಿ ಬೆಂಡೆಕಾಯಿ ಕೃಷಿ ನಡೆಸಲಾಗಿದ್ದು, ಉತ್ತಮ ಫಸಲು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಆಹ್ಲಾದಕ್ಕೆ ಕಾರಣವಾಯಿತು 

ಕಾರ್ಯಕ್ರಮದಲ್ಲಿ ಶಾಲಾ ಮಾತೃ ಪಿಟಿಎ ಅಧ್ಯಕ್ಷೆ ಅರುದಂತಿ, ಶಾಲಾ ನಿರ್ವಹಣಾ ಸಮಿತಿ ಅಧ್ಯಕ್ಷ ರಜಾಕ್ ತೋಣಿ, ಶಾಲಾ ನಿರ್ವಹಣಾ ಸಮಿತಿ ಸದಸ್ಯ ಆನಂದ ಎಂ.ಕೆ, ಶಾಲಾ ಮುಖ್ಯ ಶಿಕ್ಷಕಿ ಭಾನು ಎ.ಸಿ., ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಶಾಲಾ ವಠಾರದಲ್ಲಿ ತರಕಾರಿ ಕೃಷಿ ನಡೆಸುವ ಮೂಲಕ ಶಾಲಾ ಮಧ್ಯಾಹ್ನದೂಟದ ಪದಾರ್ಥಕ್ಕೆ ಬಳಸಲಾಗುತ್ತಿದ್ದು, ತರಕಾರಿ ಕೃಷಿ ನಡೆಸಲು ಆಯಾ ಪಂಚಾಐಇತಿಯ ಕೃಷಿಭವನವೂ ಸಹಕಾರ ನೀಡುತ್ತಿದೆ. 

ಶಾಲೆಯ 'ಪೌಷ್ಟಿಕ ತೋಟ'ದಲ್ಲಿ ಬೆಳೆದ ತರಕಾರಿಯನ್ನು ಶಾಲಾ ಮಕ್ಕಳ ಮಧ್ಯಾಹ್ನದ ಊಟಕ್ಕೆ ಬಳಸುವ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರದ ಮಹತ್ವವನ್ನು ತಿಳಿಸುವುದರ ಜೊತೆಗೆ, ಕೃಷಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮತ್ತು ಪರಿಸರ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries