ಕಾಸರಗೋಡು: ಕೇರಳ ರಾಜ್ಯ ಪಿಂಚಣಿದಾರರ ಸಂಘ(ಕೆಎಸ್‍ಪಿಎಸ್)ಮುಳಿಯಾರ್ ಘಟಕ ದ ವಾರ್ಷಿಕ ಸಮ್ಮೇಳನ ಬೋವಿಕ್ಕಾನ ಕೇಶವ ಸ್ಮೃತಿ ಮಂದಿರದಲ್ಲಿ ಜರುಗಿತು. ಕಾಸರಗೋಡು ಬ್ಲಾಕ್ ಸಮಿತಿ ಕಾರ್ಯದರ್ಶಿ ರಾಜೇಂದ್ರ ಕುಂಟಾರು ವಾರ್ಷಿಕ ಸಮ್ಮೇಳನ ಉದ್ಘಾಟಿಸಿದರು. ಸುರೇಶ್ ಬಿ.ಎ ಅಧ್ಯಕ್ಷತೆ ವಹಿಸಿದ್ದರು. ಪಿಂಚಣಿದಾರರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳು ಹಾಗೂ ಮೆಡಿಸೆಪ್‍ನ ಬಗ್ಗೆ ಮಾಹಿತಿ ನೀಡಿದರು.
ನಂತರ ಕೆಎಸ್‍ಪಿಎಸ್ ಜಿಲ್ಲಾ ಕಾರ್ಯದರ್ಶಿ ಕುಞÂರಾಮನ್ ಕೇಳೋತ್ ಮಾತನಾಡಿ, ನಮಗೆಸಿಗಬೇಕಾದ ಸವಲತ್ತುಗಳನ್ನು ಸಂರಕ್ಷಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಮುಳಿಯಾರ್ ಯುನಿಟ್ ಗೌರವಾಧ್ಯಕ್ಷ ಕರುಣಾಕರ ಮಾಸ್ಟರ್, ಮುಳಿಯಾರ್ ಘಟಕ ಉಪಾಧ್ಯಕ್ಷ ಗೋವಿಂದ ಭಟ್ ಬಳ್ಳಮೂಲೆ, ಕಾಸರಗೋಡು ಜಿಲ್ಲಾ ಸಮಿತಿ ಜತೆ ಕಾರ್ಯದರ್ಶಿ ನಾರಾಯಣ ಮಾಸ್ಟರ್, ದೇಲಂಪಾಡಿ ಪಂಚಾಯಿತಿ ಸಮಿತಿ ಕಾರ್ಯದರ್ಶಿ ರವೀಂದ್ರ ರಾವ್ ಉಪಸ್ಥಿತರಿದ್ದರು.
ಯೂನಿಟ್ ಕಾರ್ಯದರ್ಶಿ ವಿಮಲ ರೈ ಕೊಡವಂಜಿ ಸ್ವಾಗತಿಸಿ, ವರದಿ ವಾಚಿಸಿದರು. ಕೋಶಾಧಿಕಾರಿ ರಾಮಣ್ಣ ರೈ ವಂದಿಸಿದರು. ಈ ಸಂದರ್ಭ ಯೂನಿಟ್‍ನ ಹಾಲಿ ಸಮಿತಿ ಯನ್ನೇ ಮುಂದುವರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.


