HEALTH TIPS

ಮಹಾರಾಷ್ಟ್ರ ಏಕರೂಪ ನಾಗರಿಕ ಸಂಹಿತೆ ಸಮಿತಿಗೆ ಚವಾಣ್‌ ರಾಜೀನಾಮೆ

ಮುಂಬೈ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಕರಡು ರೂಪಿಸಲು ಮಹಾರಾಷ್ಟ್ರ ಸರ್ಕಾರ ರಚಿಸಿದ್ದ ಸಮಿತಿಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್‌.ಸಿ.ಚವಾಣ್‌ ಅವರು ರಾಜೀನಾಮೆ ನೀಡಿದ್ದಾರೆ.


ಸೆಪ್ಟೆಂಬರ್‌ 19ರಂದು ಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ಚವಾಣ್‌ ಅವರು, ಸಮಿತಿಯ ಕಾರ್ಯವೈಖರಿ ಸರಿಯಿಲ್ಲ ಮತ್ತು ರಾಜ್ಯದ ಹೊರಗಿನ ಅಧಿಕಾರಿಯೊಬ್ಬರು ಸಮಿತಿಯ ಚಟುವಟಿಕೆಗಳಲ್ಲಿ ಭಾಗಿ ಆಗುತ್ತಿದ್ದಾರೆ ಎಂಬ ಬೇಸರ ಹೊರಹಾಕಿದ್ದಾರೆ. 

ಜುಲೈನಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ಅವರ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿ ರಚಿಸಿದ್ದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಸಮಗ್ರ ವರದಿ ಸಲ್ಲಿಸಲು ಆರು ತಿಂಗಳ ಅವಕಾಶ ನೀಡಿದ್ದರು.

ಯಾವುದೇ ವಿಸ್ತೃತ ಚರ್ಚೆ ಇಲ್ಲದೆ ಸಮಿತಿಯ ಸಭೆಗಳು ಅಂತ್ಯಗೊಳ್ಳುತ್ತಿವೆ. ಪ್ರಶ್ನಾವಳಿ ರೂಪಿಸುವುದೂ ಸೇರಿ ಹಲವು ವಿಚಾರಗಳಲ್ಲಿ ಸದಸ್ಯರ ಸಲಹೆಗಳಿಗೆ ಮಾನ್ಯತೆ ಸಿಗುತ್ತಿಲ್ಲ ಎಂಬುದೂ ಸೇರಿ ಹಲವು ಅತೃಪ್ತಿಗಳನ್ನು ರಾಜೀನಾಮೆ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ನಾಗ್ಪರದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಯುಸಿಸಿ ಮಸೂದೆ ಮಂಡಿಸಲು ಸರ್ಕಾರ ಉದ್ದೇಶಿಸಿದೆ ಎಂದು ಕಳೆದ ವಾರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದರು.

ಈ ನಡುವೆ 'ಸಮಿತಿಯಲ್ಲಿ ಅಲ್ಪಸಂಖ್ಯಾತ ಪ್ರತಿನಿಧಿಯೇ ಇಲ್ಲ' ಎಂದು ಎನ್‌ಸಿಪಿಯ ವಿಧಾನಪರಿಷತ್ ಸದಸ್ಯ ಇದ್ರೀಸ್‌ ನಾಯಿಕ್‌ವಾಡಿ ಆಕ್ಷೇಪ ಎತ್ತಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries