HEALTH TIPS

ಒಂದು ವರ್ಷದ ಅಕ್ರಮ ಸಂಪತ್ತಿನಿಂದ ವಿಶ್ವದಲ್ಲಿಯ ಎಲ್ಲರಿಗೂ ಲ್ಯಾಪ್‌ಟಾಪ್ ಖರೀದಿಸಬಹುದು: ಸಿಜೆಐ

ನವದೆಹಲಿ: ಜಗತ್ತಿನಲ್ಲಿ ಕೇವಲ ಒಂದು ವರ್ಷದಲ್ಲಿ ಅಕ್ರಮವಾಗಿ ವರ್ಗಾವಣೆಯಾಗುವ ಹಣದ ಮೊತ್ತವು ಭೂಮಿಯ ಮೇಲಿನ ಪ್ರತಿಯೊಬ್ಬರಿಗೂ ಒಂದು ಸಾಧಾರಣ ಲ್ಯಾಪ್‌ಟಾಪ್ ಖರೀದಿಸಲು ಸಾಕಾಗುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ (ಸಿಜೆಐ) ಹೇಳಿದ್ದಾರೆ.

ಲಂಡನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಆರ್ಥಿಕ ಅಪರಾಧಗಳ ಕುರಿತು 43ನೇ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಡಿಜಿಟಲ್ ಅರೆಸ್ಟ್‌ನಂತಹ ಹೊಸ ಮೋಸದ ಜಾಲಗಳನ್ನು ಮಟ್ಟಹಾಕುವಲ್ಲಿ ಭಾರತೀಯ ನ್ಯಾಯಾಂಗವು ಸಂಸತ್ತಿನ ಕ್ರಮಕ್ಕಾಗಿ ಕಾಯದೆ ಸಕ್ರಿಯವಾಗಿ ಸ್ಪಂದಿಸಿದೆ ಎಂದರು.

ಈ ಅಪಾರ ಅಕ್ರಮ ಸಂಪತ್ತಿನಲ್ಲಿ ಶೇ.1ಕ್ಕಿಂತ ಕಡಿಮೆ ಮೊತ್ತ ಮಾತ್ರ ವಸೂಲಿಯಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಭಾರತದ ಕುರಿತು ಮಾತನಾಡಿದ ಅವರು, ಪಿಎಂಎಲ್‌ಎ ಕಾಯ್ದೆಯ ದುರ್ಬಳಕೆ ಆರೋಪಗಳು ಕೇಳಿಬಂದಾಗ, ಬಂಧನದ ಕಾರಣಗಳನ್ನು ಲಿಖಿತವಾಗಿ ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ ಎಂದು ತಿಳಿಸಿದರು.

ಆರ್ಥಿಕ ಅಪರಾಧಗಳು ಗಡಿಯನ್ನು ಮೀರಿ ನಡೆಯುವುದರಿಂದ, ಜಾಗತಿಕ ಮಟ್ಟದಲ್ಲಿ ಎಚ್ಚರಿಕೆ, ಸಹಕಾರ ಮತ್ತು ಕಾನೂನಿನ ಆಡಳಿತ ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries