ಕಲ್ಪೆಟ್ಟ: ಮುಟ್ಟಿಲ್ ಮರ ಕಡಿದು ಸಾಗಾಟ ವಂಚನೆ ಪ್ರಕರಣದಲ್ಲಿ ಅರಣ್ಯ ಇಲಾಖೆ ಸಲ್ಲಿಸಿದ ಆರೋಪ ಪಟ್ಟಿಯನ್ನು ಬತ್ತೇರಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಹಿಂದಿರುಗಿಸಿದೆ. ಆರೋಪ ಪಟ್ಟಿಯನ್ನು ಸಲ್ಲಿಸುವಲ್ಲಿ ವಿಳಂಬಕ್ಕೆ ಕಾರಣವನ್ನು ಸ್ಪಷ್ಟಪಡಿಸುವ ದಾಖಲೆ ಇಲ್ಲದಿರುವುದು ಮತ್ತು ಇತರ ತಾಂತ್ರಿಕ ದೋಷಗಳನ್ನು ನ್ಯಾಯಾಲಯವು ಉಲ್ಲೇಖಿಸಿದೆ.
ಪರಿಶೀಲನೆಗಳನ್ನು ಪೂರ್ಣಗೊಳಿಸಿದ ನಂತರ ಶೀಘ್ರದಲ್ಲೇ ಪರಿಷ್ಕøತ ಆರೋಪ ಪಟ್ಟಿಯನ್ನು ಮತ್ತೆ ಸಲ್ಲಿಸುವುದಾಗಿ ಅರಣ್ಯ ಇಲಾಖೆ ತಿಳಿಸಿದೆ. ಮುಟ್ಟಿಲ್‍ನಿಂದ ಕತ್ತರಿಸಿ ಎರ್ನಾಕುಳಂ ಕರೀಮ್ ನಿಂದ ವಶಪಡಿಸಿಕೊಂಡ ಮರಕ್ಕೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಅರಣ್ಯ ಇಲಾಖೆ ಈಗ ಆರೋಪ ಪಟ್ಟಿಯನ್ನು ಸಲ್ಲಿಸಿದೆ.
ಚೋಟ್ಟಾನಿಕ್ಕರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಈ ಪ್ರಕರಣದಲ್ಲಿ ಅರಣ್ಯ ಇಲಾಖೆ ಇನ್ನೂ ಆರೋಪಪಟ್ಟಿ ಸಲ್ಲಿಸಿಲ್ಲ ಎಂದು ಆರೋಪಿಗಳು ವಾದಿಸಿದ್ದರು. ಇದರ ನಂತರ, ಅರಣ್ಯ ಇಲಾಖೆ ತರಾತುರಿಯಲ್ಲಿ ಆರೋಪಪಟ್ಟಿ ಸಲ್ಲಿಸಿತು.
ಮುಟ್ಟಿಲ್ ಮರ ಕಡಿದ ಪ್ರಕರಣದಲ್ಲಿ ಅರಣ್ಯ ಇಲಾಖೆ ಗಂಭೀರ ಲೋಪ ಎಸಗಿರುವುದು ಇದೇ ಮೊದಲಲ್ಲ.

