HEALTH TIPS

ಗುಜರಾತ್: ದುರಂತ ಸಂಭವಿಸಿದ್ದ ಮಾರ್ಗದಲ್ಲೇ ಹೊಸ ಮೇಲ್ಸೇತುವೆ ಉದ್ಘಾಟಿಸಿದ ಸಿಎಂ

ವಡೋದರಾ: ಆನಂದ್ ನಗರದಿಂದ ವಡೋದರಾಗೆ ಸಂಪರ್ಕ ಕಲ್ಪಿಸುವ ನೂತನ ಮೇಲ್ಸೇತುವೆಯನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಭಾನುವಾರ ಉದ್ಘಾಟಿಸಿದ್ದಾರೆ.

ಈ ಸೇತುವೆಯನ್ನು ಮಹಿಸಾಗರ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. 


ಆನಂದ್‌ ಜಿಲ್ಲೆಯ ಅಂಕ್ಲಾವ್ ತಾಲ್ಲೂಕಿನ ಗಂಭೀರಾ ಎಂಬ ಹಳ್ಳಿಯ ಸಮೀಪ, ಸುಮಾರು 40 ವರ್ಷ ಹಳೆಯ ಸೇತುವೆ 2025ರ ಜುಲೈ 9ರಂದು ಕುಸಿದು ಬಿದ್ದಿತ್ತು. 

ದುರಂತದಲ್ಲಿ 22 ಮಂದಿ ಮೃತಪಟ್ಟಿದ್ದರು. ಅವಘಡಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂಬ ಟೀಕೆ ವ್ಯಕ್ತವಾಗಿತ್ತು.

ಅದೇ ಸ್ಥಳದಲ್ಲಿ, ₹ 212 ಕೋಟಿ ವೆಚ್ಚದಲ್ಲಿ ನೂತನ ಮೇಲ್ಸೇತುವೆ ನಿರ್ಮಿಸಲಾಗಿದೆ.

ವಡೋದರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಪಟೇಲ್‌, ಮೇಲ್ಸೇತುವೆ ಸೇರಿದಂತೆ ₹ 1,297 ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

ಪ್ರತಿಯೊಂದು ಗ್ರಾಮ, ಪ್ರತಿಯೊಂದು ಕುಟುಂಬವನ್ನೂ ಮುಖ್ಯವಾಹಿನಿಗೆ ತರಲು ಸರ್ಕಾರ ಶ್ರಮಿಸುತ್ತಿದೆ. ಸಾರ್ವಜನಿಕರ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ಜಾರಿಗೊಳಿಸಲು ಬದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸಾಮಾಜಿಕ ಸಾಮರಸ್ಯ ಮತ್ತು 'ವಸುಧೈವ ಕುಟುಂಬಕಂ' (ಜಗತ್ತು ಒಂದು ಕುಟುಂಬ) ಧೋರಣೆಗೆ ಪ್ರೋತ್ಸಾಹ ಲಭಿಸಿದೆ ಎಂದು ಹೇಳಿದ್ದಾರೆ.

ವಡೋದರಾ ಸೇತುವೆ ಕುಸಿತ ಪ್ರಕರಣ: ಬಿದ್ದ ವಾಹನಗಳೆಷ್ಟು..? ಬದುಕಿದವರೆಷ್ಟು..?

ಮೋದಿ ಸೇವೆ ಗುರುತಿಸಲು 'ಸಂಕಲ್ಪ'
ಮೋದಿ ಅವರು 25 ವರ್ಷಗಳ ಅಧಿಕಾರಾವಧಿಯಲ್ಲಿ ಮಾಡಿದ ಸೇವೆಯನ್ನು ಗುರುತಿಸಲು ಬಿಜೆಪಿಯು ಸೆಪ್ಟೆಂಬರ್ 17ರಿಂದ ಅಕ್ಟೋಬರ್‌ 17ರವರೆಗೆ ದೇಶದಾದ್ಯಂತ 'ಸೇವಾ ಸಂಕಲ್ಪ' ಅಭಿಯಾನ ನಡೆಸುತ್ತಿದೆ.

ಈ ಬಗ್ಗೆ ಮಾತನಾಡಿರುವ ಪಟೇಲ್‌, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ 'ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್' ಮಂತ್ರವನ್ನು ಕಾರ್ಯರೂಪಕ್ಕೆ ತರುವ ಮೂಲಕ ಅಭಿವೃದ್ಧಿ ರಾಜಕೀಯಕ್ಕೆ ಹೊಸ ದಿಕ್ಕು ನೀಡಲಾಗಿದೆ ಎಂದಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries