HEALTH TIPS

ಕಾರ್ಮಾರಿನಲ್ಲಿ ಕೆಸರ್‍ಡೊಂಜಿ ದಿನ ಕಾರ್ಯಕ್ರಮ: ಗದ್ದೆಯಲ್ಲಿ ಮನೋರಂಜನಾ ಸಂಭ್ರಮ- ಜನರ ಸಹಭಾಗಿತಕ್ಕೆ ಉತ್ತವ ಸಾಕ್ಷಿಯಾಗಲಿ: ಸಂಸದ ಉಣ್ಣಿತ್ತಾನ್

ಬದಿಯಡ್ಕ: ಸ್ವಾತಂತ್ರ್ಯ ಹೋರಾಟ ಕಾಲದಿಂದಲೇ ಗಣೇಶ ಚತುರ್ಥಿಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಸಾರ್ವಜನಿಕ ಸಮಷ್ಠಿಯಲ್ಲಿ ಆಚರಣೆಗೆ ತಂದ ಲೋಕಮಾನ್ಯ ಬಾಲಗಂಗಾಧರ ತಿಲಕರ ಸಮಯೋಚಿತ ಆಲೋಚನೆ ಇಂದು ಸನಾತನ ಧರ್ಮಕ್ಕೊಂದು ಮೈಲುಗಲ್ಲಾಗಿದೆ ಎಂದು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿಸ್ತಾನ್ ಹೇಳಿದ್ದಾರೆ.


ಕಾರ್ಮಾರಿನಲ್ಲಿ ಶ್ರೀ ಗಣೇಶೋತ್ಸವ ಪೂರ್ವ ಭಾವಿಯಾಗಿ ನಡೆದ ಹೆಸರ್‍ಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ದೇವರ ಪ್ರೀತ್ಯರ್ಥಕ್ಕೆ ಪ್ರಕೃತಿಯೊಂದಿಗಿನ ಸಮ್ಮಿಳಿತದ ಈ ಉತ್ಸವವು ನಾಡಿನ ಜನ ಸಹಭಾಗಿತಕ್ಕೆ ಸಾಕ್ಷಿಯಾಗಲಿ ಎಂದು ಸಂಸದರು ನುಡಿದರು. ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ಸಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಆಶೀರ್ವಚನ ನೀಡಿ, ಭೂಮಿ ತಾಯಿಯ ಮಡಿಲಲ್ಲಿ ಮಕ್ಕಳೆಲ್ಲಾ ಸೇರಿ ಆಟವಾಡುವುದೇ ಸೊಬಗು. ಇದು ಸ್ಪರ್ಧೆಯಲ್ಲ ಬದಲಾಗಿ ಪರಸ್ಪರ ಸೌಹರ್ದತೆಯ ಸಂಕೇತವಾಗಲಿ ಎಂದರು.


ಸಮಾರಂಭದಲ್ಲಿ ಬದಿಯಡ್ಕ ಪಂಚಾಯತಿ ಅಧ್ಯಕ್ಷ ಶಂಕರ ಡಿ. ಅಧ್ಯಕ್ಷತೆ ವಹಿಸಿದ್ದರು. ಡಾ. ಶ್ರೀನಿಧಿ ಸರಳಾಯ ಬದಿಯಡ್ಕ ಕಾರ್ಮಾರು ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ನರಸಿಂಹ ಭಟ್ ಕಾರ್ಮಾಗು, ಜಿಲ್ಲಾ ಪಂಚಾಯತಿ ಸದಸ್ಯ ರಾಮಪ್ಪ ಮಂಜೇಶ್ವರ, ಬ್ಲಾಕ್ ಪಂಚಾಯತಿ ಸದಸ್ಯ ಮಹೇಶ್ ವಳಕ್ಕುಂಜ, ಬದಿಯಡ್ಕ ಗ್ರಾಮ ಪಂಚಾಯತಿ ಸ್ವಾಯೀ ಸಮಿತಿ ಅಧ್ಯಕ್ಷೆ ರಜನಿ ಸಂದೀಪ್, ಜನಪ್ರತಿನಿಧಿ ಶ್ಯಾಮಪ್ರಸಾದ್ ಮೇಗಿನಡ್ಕ, ನೀರ್ಚಾಲು ಶಾಲಾ ಎನ್.ಎಸ್.ಎಸ್ ಯೋಜನಾಧಿಕಾರಿ ಹರೀಶ್ ಮಾಸ್ತರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬದಿಯಡ್ಕ ವಲಯ ಮೇಲ್ವಿಚಾರತಿ ಸುಗುಣಾ, ಸುಂದರ ಶೆಟ್ಟಿ ಕೊಲ್ಲಂಗಾನ, ಸಂತೋಷಕುಮಾರ್ ಎಸ್.ಮಾನ್ಯ, ಶ್ರೀಮಹಾವಿಷ್ಣು ಯುವಕ ವೃಂದದ ಅಧ್ಯಕ್ಷ ಪುರುಷೋತ್ತಮ ಕಾರ್ಮಾರು ಮೊದಲಾದವರು ಉಪಸ್ಥಿತರಿದ್ದರು.

ವಿಜಯ ಕುಮಾರ್ ಮಾನ್ಯ ಸ್ವಾಗತಿಸಿ, ಯುವಕ ವೃಂದದ ಕಾರ್ಯದರ್ಶಿ ಶಶಿಕಾಂತ್ ಶೆಟ್ಟಿ ಕಾರ್ಮಾರು ವಂದಿಸಿದರು. ಮಾನ್ಯ ಜೆಎಎಸ್‍ಬಿ ಶಾಲಾ ಮುಖ್ಯೋಪಾಧ್ಯಾಯ ಸುರೇಂದ್ರನ್ ಎಂ.ಎ. ಹಾಗೂ ನಿವೃತ್ತ ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ನಿರೂಪಿಸಿದರು.


ಕೆಸರುಗದ್ದೆಯ ವಿಶೇಷತೆಗಳು:

ಶಾಂಭವಿ ಚಂದ್ರಹಾಸ ಶೆಟ್ಟಿ ಮುಳ್ಳೇರಿಯ ಇವರ ಕಾಜಿ ಮತ್ತು ಜನ್ನ ಹೊಸರಿನ ಕಂಬಳದ ಕೋಣಗಳು ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮದಿಂದ ಸಂಜೆ ವರೆಗೆ ಗದ್ದೆಯಲ್ಲಿ ತುಳುನಾಡಿನ ಕಂಬಳದ ದ್ಯೋತಕವಾಗಿ ಗಮನ ಸೆಳೆದವು. ಕೆಸರುಗದ್ದೆ ಕ್ರೀಡಾಕೂಟ ಹಾಗೂ ಮಕ್ಕಳ ನೃತ್ಯ, ಮಹಿಳೆಯರ ಪಾಡ್ದನ, ಹಾಡು ಇತ್ಯಾದಿ ಮನೋರಂಜನೆ ನೀಡಿತು.

ಮಧ್ಯಾಹ್ನ ಕ್ಷೇತ್ರ ಪರಿಸರದಲ್ಲಿ ಗ್ರಾಮೀಣ ಸೊಗಡಿನ ಭಕ್ಷ್ಯ ಭೋಜನವನ್ನು ನೆರೆದ ನೂರಾರು ಜನರು ಸವಿದರು. ಗದ್ದೆಯಲ್ಲಿ ಮಕ್ಕಳು, ಮಹಿಳೆಯರು, ಪುರುಷರು ವಿವಿಧ ಸಾಂಪ್ರದಾಯಿಕ ಹಾಗೂ ಮನೋರಂಜನಾ ಸ್ಪರ್ಧೆಗಳಲ್ಲಿ ಹಲವಾರು ಮಂದಿ ಪಾಲ್ಗೊಂಡಿದ್ದರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries