HEALTH TIPS

ಜ್ಞಾನೇಶ್‌ ಕುಮಾರ್ ಪುತ್ರಿ ನೋಯ್ಡಾ DM ಮೇಧಾ ರೂಪಂ ಪ್ರಕರಣ | ಸುಪ್ರೀಂ ಕೋರ್ಟ್ ಆದೇಶ ಪರಿಷ್ಕರಣೆ

 ನವದೆಹಲಿ: ನೋಯ್ಡಾ ಕಾರ್ಮಿಕರ ಪ್ರತಿಭಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿ ಬಂಧನಕ್ಕೊಳಗಾಗಿದ್ದ ವಿದ್ಯಾರ್ಥಿನಿ ಆಕೃತಿ ಚೌಧರಿ ಅವರ ಬಂಧನವನ್ನು ರದ್ದುಪಡಿಸಿದ ಅಲಹಾಬಾದ್ ಹೈಕೋರ್ಟ್ನ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿಲ್ಲ. ಆದರೆ, ಆ ತೀರ್ಪಿನಲ್ಲಿ ನೋಯ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ (DM), ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಪುತ್ರಿ ಮೇಧಾ ರೂಪಂ ವಿರುದ್ಧ ಮಾಡಿರುವ ಟೀಕೆಗಳು ಹಾಗೂ ಆಕೃತಿ ಚೌಧರಿ ಅವರಿಗೆ 5 ಲಕ್ಷ ರೂ.ಪರಿಹಾರ ಪಾವತಿಸುವಂತೆ ನೀಡಿರುವ ನಿರ್ದೇಶನಕ್ಕೆ ತಡೆ ನೀಡಿದೆ ಎಂದು livelaw.in ವರದಿ ಮಾಡಿದೆ. 


ಗೌತಮ್ ಬುದ್ಧ ನಗರ (ನೋಯ್ಡಾ) DM ಮೇಧಾ ರೂಪಂ ಅವರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಪರಿಷ್ಕರಿಸಿದೆ. ಮೇಧಾ ರೂಪಂ ಮತ್ತು ಉತ್ತರ ಪ್ರದೇಶ ಸರ್ಕಾರವು ಅಲಹಾಬಾದ್ ಹೈಕೋರ್ಟ್ ನ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು.

ಅಲಹಾಬಾದ್ ಹೈಕೋರ್ಟ್ನ ತೀರ್ಪಿನ 27ರಿಂದ 33ರವರೆಗಿನ ಪ್ಯಾರಾಗಳಲ್ಲಿ ಮೇಧಾ ರೂಪಂ ವಿರುದ್ಧದ ಪ್ರತಿಕೂಲ ಟೀಕೆಗಳು ಹಾಗೂ ಆಕೃತಿ ಚೌಧರಿ ಅವರಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ನಿರ್ದೇಶನ ನೀಡಲಾಗಿತ್ತು. ಈ ಪರಿಹಾರದ ಮೊತ್ತವನ್ನು ಮೇಧಾ ರೂಪಂ ಅವರ ವೇತನದಿಂದ ವಸೂಲಿ ಮಾಡುವಂತೆಯೂ ಹೈಕೋರ್ಟ್ ಸೂಚಿಸಿತ್ತು.

ಈ ಟೀಕೆಗಳು, ಪರಿಹಾರ ಮತ್ತು ವೆಚ್ಚಗಳ ಪಾವತಿಗೆ ಸಂಬಂಧಿಸಿದ ನಿರ್ದೇಶನಗಳಿಗೆ ಮಾತ್ರ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಆಕೃತಿ ಚೌಧರಿ ಅವರನ್ನು NSA ಅಡಿ ಬಂಧಿಸಿದ್ದ ಕ್ರಮವನ್ನು ರದ್ದುಪಡಿಸಿರುವ ಹೈಕೋರ್ಟ್ ನ ತೀರ್ಪಿ ನ ಭಾಗಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿಲ್ಲ. ಅದರನ್ವಯ ಆಕೃತಿ ಚೌಧರಿ ಅವರ ಬಂಧನ ರದ್ದುಪಡಿಸಿದ ಹೈಕೋರ್ಟ್ ಆದೇಶ ಜಾರಿಯಲ್ಲಿದೆ.

ಈ ಹಿಂದೆ ಸುಪ್ರೀಂ ಕೋರ್ಟ್ ಅಪ್ಲೋಡ್ ಮಾಡಿದ್ದ ಆದೇಶದಲ್ಲಿ ಹೈಕೋರ್ಟ್ ತೀರ್ಪಿನ 27ರಿಂದ 33ರವರೆಗಿನ ಪ್ಯಾರಾಗಳ ಜಾರಿಗೆ ತಡೆ ನೀಡಲಾಗಿದೆ ಎಂದು ಹೇಳಲಾಗಿತ್ತು. ಇದರಿಂದ ಹೈಕೋರ್ಟ್ನ ಸಂಪೂರ್ಣ ತೀರ್ಪಿಗೆ ತಡೆ ನೀಡಲಾಗಿದೆ ಎಂಬ ಅರ್ಥ ಮೂಡಿತ್ತು.

ಬಳಿಕ ಸುಪ್ರೀಂ ಕೋರ್ಟ್ ಆದೇಶವನ್ನು ಪರಿಷ್ಕರಿಸಿ, ಮೇಧಾ ರೂಪಂ ವಿರುದ್ಧದ ಟೀಕೆಗಳು ಮತ್ತು ಪರಿಹಾರ ಹಾಗೂ ವೆಚ್ಚಗಳ ಪಾವತಿಗೆ ಸಂಬಂಧಿಸಿದ ಭಾಗಕ್ಕೆ ಮಾತ್ರ ತಡೆ ಎಂಬುದನ್ನು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಎನ್.ಕೆ. ಸಿಂಗ್ ಅವರನ್ನೊಳಗೊಂಡ ಪೀಠವು ಮೇಧಾ ರೂಪಂ ಮತ್ತು ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries