ತಿರುವನಂತಪುರ: 'ಸಿಎಂಆರ್‌ಎಲ್ ಗಣಿ ಕಂಪನಿಯಿಂದ ಲಂಚ ಪಡೆದ ಆರೋಪದಡಿ ಸಿಪಿಎಂ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂಬ ಜಾರಿ ನಿರ್ದೇಶನಾಲಯದ (ಇ.ಡಿ) ಪತ್ರದ ಕುರಿತು ಪರಿಶೀಲನೆ ನಡೆಸಿದ ಬಳಿಕ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು' ಎಂದು ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಹೇಳಿದ್ದಾರೆ.
ಪಿಣರಾಯಿ ವಿಜಯನ್, ಅವರ ಪುತ್ರಿ ಮತ್ತು ಅಳಿಯ ಹಾಗೂ ಇನ್ನೂ ಕೆಲವರ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಎಫ್‌ಐಆರ್ ದಾಖಲಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಇ.ಡಿ ಪತ್ರ ಬರೆದಿದೆ.
'ಈಗ ಸಚಿವರಾಗಿರುವ ಕೆಲವರ ವಿರುದ್ಧ, ಈ ಹಿಂದಿನ ಯುಡಿಎಫ್ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದಾಗ ಲಂಚ ಪಡೆದ ಆರೋಪವಿದೆ. ಅವರ ವಿರುದ್ಧ ಯಾಕೆ ತನಿಖೆ ನಡೆಸುತ್ತಿಲ್ಲ' ಎಂಬ ಸಿಪಿಐ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, 'ರಾಜಕೀಯ ಪಕ್ಷಗಳು ಮತ್ತು ಮುಖಂಡರು ಕಂಪನಿಗಳಿಂದ ಆರ್ಥಿಕ ದೇಣಿಗೆ ಪಡೆಯುತ್ತಾರೆ. ಇವೆರಡೂ ಭಿನ್ನ ಪ್ರಕರಣಗಳು. ಈಗ ಇ.ಡಿ ಪತ್ರದಲ್ಲಿ ಮಾಡಿದ ಆರೋಪಗಳು ಗಂಭೀರವಾದವು' ಎಂದಿದ್ದಾರೆ.
'ಇ.ಡಿ ಪತ್ರವು ರಾಜಕೀಯ ಪ್ರೇರಿತ. ಈ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಪ್ಪಂದವಾಗಿ ರುವ ಸಾಧ್ಯತೆ ಇದೆ' ಎಂದು ಗೋವಿಂದನ್ ಆರೋಪಿಸಿದ್ದಾರೆ.
'ಸಹಕಾರ ಕ್ಷೇತ್ರ ದುರ್ಬಲಗೊಳಿಸಲು ಇ.ಡಿ ಹುನ್ನಾರ'
ಕೊಟ್ಟಾಯಂ: ಕರುವಣ್ಣೂರ್ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಬಹು ಕೋಟಿ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ) ವಿರುದ್ಧ ಕೇರಳಂ ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಅವರು ಟೀಕಾಪ್ರಹಾರ ನಡೆಸಿದ್ದಾರೆ.
ಬ್ಯಾಂಕ್‌ನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ ಅವರು, 'ರಾಜ್ಯದ ಸಹಕಾರ ಕ್ಷೇತ್ರವನ್ನು ದುರ್ಬಲಗೊಳಿಸುವ ಹುನ್ನಾರ ಇದರ ಹಿಂದಿದೆ' ಎಂದು ದೂರಿದ್ದಾರೆ.'ಹಗರಣದ ಆರೋಪಿಗಳ ವಿರುದ್ಧ ರಾಜ್ಯ ಪೊಲೀಸರು ಕ್ರಮ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ, ಸಿಪಿಎಂ ಪಕ್ಷವನ್ನೇ ದೋಷಿ ಎಂದು ಸಾಬೀತು ಮಾಡುವ ದುರುದ್ದೇಶದಿಂದ ಇ.ಡಿ ಮಧ್ಯಪ್ರವೇಶಿಸಿದೆ' ಎಂದು ಆರೋಪಿಸಿದರು.
'ಪ್ರಕರಣದ ಆರೋಪಿಗಳಿಗೆ ಮಾಫಿ ಸಾಕ್ಷಿಗಳಾಗುವಂತೆ ಅವರು ಒತ್ತಡ ಹೇರಿದ್ದರು. ಇದು ರಾಜಕೀಯ ಪ್ರೇರಿತ' ಎಂದು ಕಿಡಿಕಾರಿದ್ದಾರೆ.
- ರಾಜೀವ್ ಚಂದ್ರಶೇಖರ್, ಬಿಜೆಪಿ ಕೇರಳಂ ರಾಜ್ಯ ಘಟಕದ ಅಧ್ಯಕ್ಷಸ್ವಲ್ಪವಾದರೂ ನಾಚಿಕೆ ಇದ್ದರೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಪಿಣರಾಯಿ ವಿಜಯನ್ ಕೆಳಗಿಳಿಯಬೇಕು. ಅವರು ಈ ಹುದ್ದೆಯಲ್ಲಿ ಮುಂದುವರಿಯಲು ಸಮರ್ಥರಲ್ಲ

