HEALTH TIPS

ಸಾಹಿಲ್ ಆತ್ಮಹತ್ಯೆ: ಕ್ಷಮಾಪಣೆ ಪೋಸ್ಟ್ ಅಳಿಸಿ ಮತ್ತೆ ಪ್ರಕಟಿಸಿದ ಬಾಂಬೆ IIT

ನವದೆಹಲಿ:  ದಲಿತ ಸಮುದಾಯಕ್ಕೆ ಸೇರಿದ 20 ವರ್ಷದ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಬಾಂಬೆ IIT ಸೆಪ್ಟೆಂಬರ್ 21ರಂದು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದ್ದ ಕ್ಷಮಾಪಣೆ ಹೇಳಿಕೆಯನ್ನು ಗುರುವಾರ ಅಳಿಸಿತ್ತು. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಕ್ರಮವನ್ನು ಪ್ರಶ್ನಿಸಿ ಬಾಂಬೆ IITಯನ್ನು ತರಾಟೆಗೆ ತೆಗೆದುಕೊಂಡ ಬಳಿಕ, ಸಂಸ್ಥೆ ಅದೇ ಹೇಳಿಕೆಯನ್ನು ಮತ್ತೆ ಎಕ್ಸ್ ನಲ್ಲಿ ಪ್ರಕಟಿಸಿದೆ ಎಂದು New Indian Express ವರದಿ ಮಾಡಿದೆ. 


ಸಾಹಿಲ್ ವಾಕೋಡೆ ಮೃತಪಟ್ಟ ಬಳಿಕ ಬಾಂಬೆ IIT ನೀಡಿದ್ದ ಆರಂಭಿಕ ಹೇಳಿಕೆಯಲ್ಲಿ, ಮಧ್ಯಾವಧಿ ಪರೀಕ್ಷೆಯ ವೇಳೆ ಸಾಹಿಲ್ ಮೊಬೈಲ್ ಬಳಸುತ್ತಿರುವುದು ಕಂಡುಬಂದಿತ್ತು. ಆದರೆ, ಈ ಕಾರಣಕ್ಕಾಗಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸಂಸ್ಥೆ ಹೇಳಿತ್ತು.

ಆದರೆ, ಆ ಹೇಳಿಕೆಯಲ್ಲಿ ಸಾಹಿಲ್ ಅವರ ಸಾವಿನ ಬಗ್ಗೆ ಹೆಚ್ಚಿನ ದುಃಖ ಅಥವಾ ವಿಷಾದ ವ್ಯಕ್ತಪಡಿಸುವ ಬದಲು, ಅವರು ಪರೀಕ್ಷೆಯಲ್ಲಿ ವಂಚನೆ ಎಸಗಲು ಪ್ರಯತ್ನಿಸಿದ್ದರು ಎಂಬ ವಿಷಯಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು.

ಈ ಹೇಳಿಕೆಗೆ ಸಂಬಂಧಿಸಿದಂತೆ ಬಾಂಬೆ IIT ಸೆಪ್ಟೆಂಬರ್ 21ರಂದು ಕ್ಷಮಾಪಣೆ ಕೇಳಿತ್ತು. 'ಸಾಹಿಲ್ ಅವರ ಸಾವಿನ ಸನ್ನಿವೇಶಗಳ ಕುರಿತು ನಮ್ಮ ಹಿಂದಿನ ಸಂವಹನಗಳಲ್ಲಿದ್ದ ಹೇಳಿಕೆಗಳಿಗೆ ನಾವು ಕ್ಷಮೆ ಯಾಚಿಸುತ್ತೇವೆ. ಈ ಘಟನೆಗೆ ಕಾರಣವಾದ ವಿವರಗಳು ಹಾಗೂ ಸನ್ನಿವೇಶಗಳನ್ನು ಸೂಕ್ತ ಪ್ರಾಧಿಕಾರಗಳು ತನಿಖೆ ನಡೆಸುತ್ತಿವೆ. ಸೂಕ್ತ ತನಿಖಾ ಪ್ರಕ್ರಿಯೆಯ ಮೂಲಕ ಸಾಹಿಲ್ ಅವರ ಸಾವಿನ ಕಾರಣಗಳು ಕ್ರಮಬದ್ಧವಾಗಿ ನಿರೂಪಿತವಾಗುವವರೆಗೆ, ಅವರ ಸಾವಿನ ಸುತ್ತಲಿನ ಸನ್ನಿವೇಶಗಳನ್ನು ನಿರ್ಧರಿಸುವುದು ಅಥವಾ ವಿವರಗಳನ್ನು ನೀಡುವುದು ಅಸಮರ್ಪಕವಾಗಲಿದೆ' ಎಂದು ಸಂಸ್ಥೆ ಹೇಳಿತ್ತು.

►ಪೋಸ್ಟ್ ಅಳಿಸಿ, ಮತ್ತೆ ಪ್ರಕಟಣೆ

ಸೆಪ್ಟೆಂಬರ್ 21ರಂದು ಪ್ರಕಟಿಸಿದ್ದ ಈ ಕ್ಷಮಾಪಣೆ ಹೇಳಿಕೆಯನ್ನು ಬಾಂಬೆ IIT ಗುರುವಾರ ತನ್ನ ಎಕ್ಸ್ ಖಾತೆಯಿಂದ ಅಳಿಸಿತ್ತು. ಇದರಿಂದ ಸಾಮಾಜಿಕ ಮಾಧ್ಯಮ ಬಳಕೆದಾರರು ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಬಾಂಬೆ IIT ಅದೇ ಕ್ಷಮಾಪಣೆ ಹೇಳಿಕೆಯನ್ನು ಮತ್ತೆ ಎಕ್ಸ್ನಲ್ಲಿ ಪ್ರಕಟಿಸಿತು.

ಇದೇ ವೇಳೆ, ಸಾಹಿಲ್ ಪರೀಕ್ಷೆಯಲ್ಲಿ ವಂಚನೆ ಎಸಗಲು ಪ್ರಯತ್ನಿಸಿದ್ದರು ಎಂಬುದನ್ನು ಒಳಗೊಂಡಿದ್ದ ಆರಂಭಿಕ ಹೇಳಿಕೆಯನ್ನೂ ಬಾಂಬೆ IIT ಅಳಿಸಿಹಾಕಿದೆ.

ಸಾಹಿಲ್ ವಾಕೋಡೆ ಅವರೊಂದಿಗೆ ಬಾಂಬೆ IIT ಆವರಣದಲ್ಲಿ ಜಾತಿ ತಾರತಮ್ಯ ಮಾಡಲಾಗುತ್ತಿತ್ತು ಮತ್ತು ಅವರನ್ನು ಅವಮಾನಿಸಲಾಗುತ್ತಿತ್ತು. ಈ ಕಾರಣದಿಂದಲೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಾಂಬೆ IITಯ ವಿದ್ಯಾರ್ಥಿಗಳು ಹಾಗೂ ಪೋಷಕರು ಆರೋಪಿಸಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries