HEALTH TIPS

ಲಷ್ಕರ್ ಕಮಾಂಡರ್ ಸೈಫುಲ್ಲಾ ವಿರುದ್ಧ ವಾರಂಟ್ ಜಾರಿಗೊಳಿಸಿದ NIA ನ್ಯಾಯಾಲಯ

ಶ್ರೀನಗರ: ಜಮ್ಮುವಿನ ವಿಶೇಷ ಎನ್‌ಐಎ ನ್ಯಾಯಾಲಯವು ಪಾಕಿಸ್ತಾನ ಮೂಲದ ಲಷ್ಕರೆ ತೈಬಾ ಕಮಾಂಡರ್ ಸೈಫುಲ್ಲಾ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಿದೆ. ಎಪ್ರಿಲ್ 2025ರ ಪಹಲ್ಗಾಮ್ ಹತ್ಯಾಕಾಂಡ ಸೇರಿದಂತೆ ಹಲವಾರು ಪ್ರಮುಖ ಭಯೋತ್ಪಾದನಾ ದಾಳಿಗಳೊಂದಿಗೆ ಈತನಿಗೆ ನಂಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 


ಪಾಕಿಸ್ತಾನದಿಂದ ಕಾರ್ಯಾಚರಣೆ ನಡೆಸುತ್ತಿರುವ ಸೈಫುಲ್ಲಾ, ಕಾಶ್ಮೀರ ಕಣಿವೆಯಲ್ಲಿರುವ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳು, ಹಣ ಮತ್ತು ನಿರ್ದೇಶನಗಳನ್ನು ನೀಡುತ್ತಿದ್ದಾನೆ ಎಂದು ಎನ್‌ಐಎ ತಿಳಿಸಿದೆ. ಪಾಕಿಸ್ತಾನದ ಕಸೂರ್‌ನ ಚಂಗಾ ಮಂಗಾ ಗ್ರಾಮದ ನಿವಾಸಿಯಾಗಿರುವ ಈತ, ಸಜಿತ್ ಜಟ್, ಅಲಿ ಭಾಯಿ, ಹಬೀಬುಲ್ಲಾ ಮಲಿಕ್, ಲಂಗ್ಡಾ, ನೂಮಿ, ನುಮಾನ್, ಉಸ್ಮಾನ್ ಹಬೀಬ್ ಮತ್ತು ಶಾನಿ ಸೇರಿದಂತೆ ಹಲವು ಹೆಸರುಗಳಿಂದ ಕರೆಯಲ್ಪಡುತ್ತಾನೆ. ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಈತ ಸಕ್ರಿಯನಾಗಿದ್ದಾನೆ.

ಈ ವರ್ಷದ ಆರಂಭದಲ್ಲಿ ಎನ್‌ಐಎ ತಂಡವು ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ್ಲಾ ಮತ್ತು ಉಸ್ಮಾನ್ ಸೇರಿದಂತೆ ಐವರನ್ನೊಳಗೊಂಡ ಲಷ್ಕರ್ ಜಾಲವನ್ನು ಭೇದಿಸಿತ್ತು. ಬಂಧಿತನೋರ್ವನಿಂದ ಸೈಫುಲ್ಲಾನಿಗೆ ನಂಟಿರುವ ಟೆಲಿಗ್ರಾಫ್ ಐಡಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ದಾಳಿ ನಡೆಸಲು ಈತ ಸೂಚನೆ ನೀಡಿರುವುದು ಬೆಳಕಿಗೆ ಬಂದಿತ್ತು.

ಆರೋಪಿ ತಲೆಮರೆಸಿಕೊಂಡಿರುವುದರಿಂದ ಮತ್ತು ಸಾಮಾನ್ಯ ರೀತಿಯಲ್ಲಿ ವಿಚಾರಣೆಗೆ ಹಾಜರುಪಡಿಸಲು ಸಾಧ್ಯವಾಗದ ಕಾರಣ, ಕುಲ್ಗಾಮ್ ಎಸ್‌ಎಸ್‌ಪಿಗೆ ಜಾಮೀನು ರಹಿತ ವಾರೆಂಟ್ ಕಳುಹಿಸಿ ಕಾನೂನು ಕ್ರಮ ಜರುಗಿಸಲು ನ್ಯಾಯಾಲಯ ಆದೇಶಿಸಿದೆ.

ಎನ್‌ಐಎ ಪ್ರಕಾರ ಸೈಫುಲ್ಲಾ 2005ರಿಂದ 2007ರವರೆಗೆ ಕುಲ್ಗಾಮ್ ಜಿಲ್ಲೆಯಲ್ಲಿ ಎಲ್‌ಇಟಿ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries