HEALTH TIPS

PNB ಹಗರಣ | UAEಯಿಂದ ಗಡಿಪಾರಾದ ನೀರವ್ ಮೋದಿ ಸಹಚರ ಸಂದೀಪ್ ಮಿಸ್ತ್ರಿ ಸಿಬಿಐ ವಶಕ್ಕೆ

ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ ಸಹಚರ ಸಂದೀಪ್ ಮಿಸ್ತಿಯನ್ನು ಯುಎಇಯಿಂದ ಗಡಿಪಾರು ಮಾಡಿದ ಬಳಿಕ ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಯುಎಇಯಿಂದ ಸೋಮವಾರ ಗಡಿಪಾರಾದ ನಂತರ ಮಂಗಳವಾರ ಮುಂಬೈಗೆ ಆಗಮಿಸಿದ ಸಂದೀಪ್ ಮಿಸ್ತ್ರಿಯನ್ನು ಸಿಬಿಐ ಅಧಿಕೃತವಾಗಿ ಬಂಧಿಸಿತು. 

ಅನಂತರ ಆತನನ್ನು ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಹಾಜರು ಪಡಿಸಿತು. ಆದರೆ, ಆತನನ್ನು ಕಸ್ಟಡಿಗೆ ಕೋರಲಿಲ್ಲ. ನ್ಯಾಯಾಲಯ ಮಿಸ್ತ್ರಿಯನ್ನು ಅಕ್ಟೋಬರ್ 6ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

2025ರ ನವೆಂಬರ್‌ನಲ್ಲಿ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಜಾಮೀನು ರಹಿತ ಬಂಧನ ವಾರಂಟ್‌ಗೆ ಅನುಗುಣವಾಗಿ ಈ ಬಂಧನ ಮಾಡಲಾಗಿದೆ.

ಮಿಸ್ತ್ರಿ ಉದ್ಯಮಿ ನೀರವ್ ಮೋದಿಯ ಹಾಂಗ್‌ಕಾಂಗ್ ಮೂಲದ ಸಂಸ್ಥೆಯಾದ 'ಫ್ಯಾನ್ಸಿ ಕ್ರಿಯೇಷನ್ ಲಿಮಿಟೆಡ್'ನ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದ. ನೀರವ್ ಮೋದಿ ಮತ್ತು ಇತರ ಆರೋಪಿಗಳೊಂದಿಗೆ ಮಿಸ್ತ್ರಿ ಕ್ರಿಮಿನಲ್ ಸಂಚಿನಲ್ಲಿ ಸಕ್ರಿಯ ಪಾತ್ರ ವಹಿಸಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸುಮಾರು 6,498,20 ಕೋ.ರೂ. ವಂಚಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಭಾರತದಲ್ಲಿ ಪ್ರಕರಣ ದಾಖಲಾದ ಬಳಿಕ ಮಿಸ್ತ್ರಿ ಉದ್ಯಮಿ ನೀರವ್ ಮೋದಿ ಸಹೋದರ ನೆಹಾಲ್ ಮತ್ತು ಮತ್ತೊಬ್ಬ ತಲೆಮರೆಸಿಕೊಂಡಿರುವ ಆರೋಪಿಯೊಂದಿಗೆ ಸೇರಿ ದುಬೈಯಲ್ಲಿರುವ ನೀರವ್ ಮೋದಿಯ ವಿವಿಧ ಸಂಸ್ಥೆಗಳ ಉದ್ಯೋಗಿಗಳಿಗೆ ಬೆದರಿಕೆ ಹಾಕಿ, ಅವರು ಅಲ್ಲಿಂದ ಓಡಿ ಹೋಗುವಂತೆ ಮಾಡಿದ್ದರು. ಈ ಉದ್ಯೋಗಿಗಳು ನೀರವ್ ಮೋದಿಯ ನಕಲಿ ಕಂಪೆನಿಗಳಿಗೆ ಹೆಸರಿಗಷ್ಟೇ ನಿರ್ದೇಶಕರಾಗಿದ್ದರು ಎಂದು ಸಿಬಿಐ ತಿಳಿಸಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries