HEALTH TIPS

ಕಳ್ಳಬಟ್ಟಿ ದುರಂತ ತಡೆಗೆ ಕ್ರಮ: ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ SC ಸಲಹೆ

ನವದೆಹಲಿ: ವಿಷಯುಕ್ತ ಅಥವಾ ಕಳಪೆ ಮದ್ಯ ಸೇವನೆಯಿಂದ ಸಂಭವಿಸುವ ದುರಂತಗಳನ್ನು ತಡೆಗಟ್ಟಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಹಲವು ಕ್ರಮಗಳನ್ನು ಸೂಚಿಸಿದೆ.


ಕಳ್ಳಬಟ್ಟಿ ತಯಾರಿಕೆ, ಸಾಗಾಟ ಮತ್ತು ಮಾರಾಟವನ್ನು ತಡೆಯಲು ವಿವಿಧ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಕೆ. ವಿನೋದ್‌ ಚಂದ್ರನ್‌ ಅವರ ಪೀಠ ಹೇಳಿದೆ.

ಮುಂಬೈನಲ್ಲಿ ಸಂಭವಿಸಿದ್ದ ಕಳ್ಳಬಟ್ಟಿ ದುರಂತ ಘಟನೆ ನಂತರ 2011ರ ಅಧಿಸೂಚನೆಯ ಮೂಲಕ 'ಮಹಾರಾಷ್ಟ್ರ ವಿಷಕಾರಿ ವಸ್ತುಗಳ ನಿಯಮಾವಳಿ'ಗೆ ಸೇರಿಸಲಾಗಿದ್ದ 18ಎ ಮತ್ತು 18ಬಿ ನಿಯಮಗಳನ್ನು ರದ್ದುಪಡಿಸುವಾಗ ಪೀಠವು ಈ ಸಲಹೆಗಳನ್ನು ನೀಡಿದೆ.

'ಮದ್ಯದ ಮೇಲೆ ಸಂಪೂರ್ಣ ನಿಷೇಧ ಹೇರಿದರೆ ಕೆಲವೊಮ್ಮೆ ಮದ್ಯದ ಸಂಗ್ರಹ, ಸಾಗಾಟವನ್ನು ಭೂಗತ ಚಟುವಟಿಕೆಯನ್ನಾಗಿ ಪರಿವರ್ತಿಸುತ್ತದೆ ಮತ್ತು ನಕಲಿ ಮದ್ಯದ ಹಾವಳಿಯನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ' ಎಂದು ನ್ಯಾಯಮೂರ್ತಿ ಪಾರ್ದೀವಾಲಾ ತಮ್ಮ ತೀರ್ಪಿನಲ್ಲಿ ಬರೆದಿದ್ದಾರೆ. ಮದ್ಯದ ಸಂಪೂರ್ಣ ನಿಷೇಧದ ಬದಲಿಗೆ ಕೆಲವು ಪರ್ಯಾಯ ಕ್ರಮಗಳನ್ನು ಸೂಚಿಸಿದ್ದಾರೆ.

ಅಕ್ರಮ ಮದ್ಯ ತಯಾರಿಕೆ ಮತ್ತು ಪೂರೈಕೆಯ ಸರಪಳಿಯನ್ನು ಮುರಿಯುವುದು, ರಾಜ್ಯದ ಗಡಿಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸುವುದು ಹಾಗೂ ಕಳಪೆ ಮದ್ಯ ತಯಾರಿಕೆಗೆ ಬಳಸುವ ರಾಸಾಯನಿಕ 'ಮೆಥನಾಲ್' ಮೇಲಿನ ನಿಯಂತ್ರಣ ಬಿಗಿಗೊಳಿಸುವುದು ಪೀಠವು ನೀಡಿರುವ ಸಲಹೆಗಳ ಪ್ರಮುಖ ಅಂಶಗಳಾಗಿವೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries