HEALTH TIPS

ದೆಹಲಿಯಲ್ಲಿ SIR ಕರಡು ಪಟ್ಟಿ ಪ್ರಕಟ: ಪ್ರತಿ ಮೂವರಲ್ಲಿ ಒಬ್ಬರು ಹೆಸರು ಡಿಲೀಟ್!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ. ಒಟ್ಟು 1.45 ಕೋಟಿ ಮತದಾರರಲ್ಲಿ ಸುಮಾರು 47 ಲಕ್ಷಕ್ಕೂ ಹೆಚ್ಚು (ಪ್ರತಿ ಮೂವರಲ್ಲಿ ಒಬ್ಬರು) ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.


ಹೆಸರು ಬಿಟ್ಟುಹೋಗಿರುವ ಮತದಾರರು ಅಗತ್ಯ ದಾಖಲೆಗಳೊಂದಿಗೆ ಫಾರ್ಮ್ 6 ಸಲ್ಲಿಸುವ ಮೂಲಕ ಸೆಪ್ಟೆಂಬರ್ 30ರೊಳಗೆ ಅರ್ಜಿ ಸಲ್ಲಿಸಬಹುದು.

ನವೆಂಬರ್ 4ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದು ದೆಹಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್ 29ರವರೆಗೆ ಆಕ್ಷೇಪಣೆಗಳ ಪರಿಶೀಲನೆ ಮತ್ತು ವಿಲೇವಾರಿ ಪ್ರಕ್ರಿಯೆ ನಡೆಯಲಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕೈಗೊಂಡ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೋಲಿಸಿದರೆ, ದೆಹಲಿಯಲ್ಲಿ ಕರಡು ಹಂತದಲ್ಲೇ ಗರಿಷ್ಠ ಮಟ್ಟದ ಅಂದರೆ ಶೇ 33ರಷ್ಟು ಹೆಸರುಗಳನ್ನು ಕೈಬಿಡಲಾಗಿದೆ.

ಒಟ್ಟು ಸಂಖ್ಯೆಯ ಆಧಾರದಲ್ಲಿಯೂ ದೆಹಲಿಯಲ್ಲಿ 47 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ.

'ದೆಹಲಿಯು ರಾಷ್ಟ್ರ ರಾಜಧಾನಿಯಾಗಿರುವುದರಿಂದ ಬೇರೆಡೆಯಿಂದ ಇಲ್ಲಿಗೆ ಬಂದು ಹೋಗುವ ಜನರ ಸಂಖ್ಯೆ ಹೆಚ್ಚಿರುತ್ತದೆ. ಇಷ್ಟೊಂದು ಪ್ರಮಾಣದ ಹೆಸರುಗಳನ್ನು ಕೈಬಿಡಲು ಇದುವೇ ಪ್ರಮುಖ ಕಾರಣ' ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಸ್ತುತ ಬಿಡುಗಡೆಯಾದ ಕರಡು ಪಟ್ಟಿಯು ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ 97,53,577 ನೋಂದಾಯಿತ ಮತದಾರರ ಹೆಸರುಗಳನ್ನು ಹೊಂದಿದ್ದು, 47,56,722 ಹೆಸರುಗಳನ್ನು ಕೈಬಿಡಲಾಗಿದೆ.

ಜೂನ್ 30ರಿಂದ ಆಗಸ್ಟ್ 17ರವರೆಗೆ ಮನೆಮನೆಗೆ ತೆರಳಿ ಎಸ್‌ಐಆರ್‌ ಅಭಿಯಾನ ನಡೆಸಲಾಗಿತ್ತು. 97.5 ಲಕ್ಷ ಮತದಾರರ ವಿವರಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.

ಒಟ್ಟು 1.45 ಕೋಟಿ ಮತದಾರರಲ್ಲಿ ಶೇ 33ರಷ್ಟು ಜನರನ್ನು ಗೈರು, ಶಾಶ್ವತ ಸ್ಥಳಾಂತರ, ನಕಲಿ, ಮೃತಪಟ್ಟವರು ಮತ್ತು ಇತರರು (ಎಎಸ್‌ಡಿಡಿಒ) ವರ್ಗಗಳ ಅಡಿಯಲ್ಲಿ ಗುರುತಿಸಿ ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಕರ್ನಾಟಕದಲ್ಲಿ ಒಟ್ಟು 4.46 ಕೋಟಿ ಮತದಾರರ ಪೈಕಿ 1.07 ಕೋಟಿ ಹೆಸರುಗಳನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ. ಆಂಧ್ರಪ್ರದೇಶದಲ್ಲಿ ಈ ಸಂಖ್ಯೆ 44.89 ಲಕ್ಷದಷ್ಟಿತ್ತು. ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯುಗಳಲ್ಲಿ ಶೇಕಡ 29.64ರಷ್ಟು ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries