ಕಾಸರಗೋಡು: ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಕಾರ್ತಿಕ ದೀಪೋತ್ಸವವು ನವೆಂಬರ್ 10ರಿಂದ ಡಿಸೆಂಬರ್ 9ರ ವರೆಗೆ ನಡೆಯಲಿದೆ. ಕ್ಷೇತ್ರದ ತಂತ್ರಿವರ್ಯ ಇರುವೈಲು ಕೇಶವ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಉತ್ಸವದ ಅಂಗವಾಗಿ ಪ್ರತಿದಿನ ರಾತ್ರಿ 7 ಗಂಟೆಯಿಂದ ಭಜನಾ ಸಂಕೀರ್ತನೆ ಹಾಗೂ ರಾತ್ರಿ 8.30ಕ್ಕೆ ಮಹಾಪೂಜೆ ನಡೆಯಲಿದೆ. ಡಿಸೆಂಬರ್ 9ರಂದು ಬಲಿವಾಡು ಕೂಟದೊಂದಿಗೆ ಕಾರ್ತಿಕ ದೀಪೋತ್ಸವ ಸಂಪನ್ನಗೊಳ್ಳಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ
ಕಾರ್ತಿಕ ದೀಪೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ದೇವಸ್ಥಾನದಲ್ಲಿ ನಡೆಯಿತು. ಕ್ಷೇತ್ರದ ಪ್ರಧಾನ ಅರ್ಚಕ ಪ್ರಭಾಕರ ಕಾರಂತ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ಸೇವಾ ಸಮಿತಿಯ ಅಧ್ಯಕ್ಷ ಶೀನ ಶೆಟ್ಟಿ ಕಜೆ, ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಶೆಟ್ಟಿ, ಸಮಿತಿ ಸದಸ್ಯರಾದ ಮಂಜಪ್ಪ ಶೆಟ್ಟಿ ಅಡ್ಕ, ಕುಮಾರ್ ಕೆ.ಎಲ್., ಬಾಲಕೃಷ್ಣ ಶೆಟ್ಟಿ ಉಡುವ, ಸದಾಶಿವ ಶೆಟ್ಟಿ ನೀರಾಳ, ಸುಜೇಶ್ ಆಳ್ವ ನೀರಾಳ, ಸುದೀಪ್ ಹೊಸಮನೆ, ಸುಶಾಂತ್ ಶೆಟ್ಟಿ ಬೇರ, ಸೀತಾರಾಮ ಶೆಟ್ಟಿ ಹಳೆಮನೆ, ಚಂದ್ರಹಾಸ ಶೆಟ್ಟಿ ಓಡಾರಿ ಹಿತ್ತಿಲು, ಮಹೇಶ್ ಶೆಟ್ಟಿ ಪಾಲ್ತೋಡ್, ರವೀಂದ್ರ ಶೆಟ್ಟಿ ಪಾಲ್ತೋಡ್, ಕಿಶೋರ್ ಆಳ್ವ ದೇವಸ್ಯ, ಅನಿಲ್ ಪಕಳ ಪಾಲ್ತೋಡ್, ಸತೀಶ್ ಶೆಟ್ಟಿ ಪುಳ್ಕೂರು, ಅಶೋಕ್ ಶೆಟ್ಟಿ ನೀರಾಳ ಹಾಗೂ ಅಖಿಲ್ ರೈ ದೀಯೆ ತಿರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



