ಕಾಸರಗೋಡು: ಕುಟುಂಬಶ್ರೀ ಮಿಷನ್ನಲ್ಲಿ ಡೆಪ್ಯುಟೇಶನ್ ಆಧಾರದಲ್ಲಿ ಜಿಲ್ಲಾ ಮಿಷನ್ ಕೋಆರ್ಡಿನೇಟರ್ ಹಾಗೂ ಜಿಲ್ಲಾ ಮಿಷನ್ ಅಸಿಸ್ಟೆಂಟ್ ಕೋಆರ್ಡಿನೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಮಿಷನ್ ಕೋಆರ್ಡಿನೇಟರ್ ಹುದ್ದೆಗೆ 14 ಹಾಗೂ ಜಿಲ್ಲಾ ಮಿಷನ್ ಅಸಿಸ್ಟೆಂಟ್ ಕೋಆರ್ಡಿನೇಟರ್ ಹುದ್ದೆಗೆ 52 ಖಾಲಿ ಹುದ್ದೆಗಳಿವೆ ಎಂದು ಪ್ರಕಟಣೆ ತಿಳಿಸಿದೆ.
ಸಂಬಂಧಿತ ಹುದ್ದೆಗಳಿಗೆ ಅನುಗುಣವಾದ ವೇತನ ಶ್ರೇಣಿ ಹೊಂದಿರುವ ಸರ್ಕಾರಿ ನೌಕರರು ಅರ್ಜಿ ಸಲ್ಲಿಸಬಹುದು. ಮಾತೃ ಇಲಾಖೆಯಿಂದ ಪಡೆದ ನಿರಾಕ್ಷೇಪಣಾ ಪ್ರಮಾಣಪತ್ರದೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿಗಳನ್ನು ಕಾರ್ಯನಿರ್ವಾಹಕ ನಿರ್ದೇಶಕರು, ಕುಟುಂಬಶ್ರೀ ರಾಜ್ಯ ಬಡತನ ನಿರ್ಮೂಲನಾ ಮಿಷನ್, ತ್ರಿಡಾ ಬಿಲ್ಡಿಂಗ್, ಚಾಲಕ್ಕುಳಂ ರಸ್ತೆ, ಮೆಡಿಕಲ್ ಕಾಲೇಜು ಅಂಚೆ, ತಿರುವನಂತಪುರಂ – 695 011 ವಿಳಾಸಕ್ಕೆ ಅಕ್ಟೋಬರ್ 31ರೊಳಗೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕುಟುಂಬಶ್ರೀಯ ಅಧಿಕೃತ ವೆಬ್ಸೈಟ್ www.kudumbashree.org ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.



