HEALTH TIPS

ಸಾಕ್ಷರತಾ ಮಿಷನ್ ಸಮಾನತಾ ಕೋರ್ಸ್‌ಗಳಿಗೆ 1,317 ಮಂದಿ ನೋಂದಣಿ

ಹತ್ತನೇ ತರಗತಿ ಕೋರ್ಸ್‌ಗೆ ಅತಿ ಹೆಚ್ಚು ಆಸಕ್ತಿ; ಅಕ್ಟೋಬರ್ 31 ನೋಂದಣಿಗೆ ಕೊನೆಯ ದಿನ

ಕಾಸರಗೋಡು: ಸಾಕ್ಷರತಾ ಮಿಷನ್‌ನ ವಿವಿಧ ಸಮಾನತಾ ಕೋರ್ಸ್‌ಗಳಿಗೆ ಜಿಲ್ಲೆಯಿಂದ ಈವರೆಗೆ ಒಟ್ಟು 1,317 ಮಂದಿ ಕಲಿಕಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 


ಪ್ರಾಥಮಿಕ ಸಮಾನತಾ ಕೋರ್ಸ್‌ ಆಗಿರುವ ನಾಲ್ಕನೇ ತರಗತಿಗೆ 76 ಮಂದಿ, ಏಳನೇ ತರಗತಿಗೆ 115 ಮಂದಿ, ಹತ್ತನೇ ತರಗತಿಗೆ 611 ಮಂದಿ ಹಾಗೂ ಹೈಯರ್ ಸೆಕೆಂಡರಿ ಕೋರ್ಸ್‌ಗೆ 515 ಮಂದಿ ನೋಂದಾಯಿಸಿಕೊಂಡಿದ್ದಾರೆ.

ಪಂಚಾಯತ್ ಮತ್ತು ನಗರಸಭೆ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಾಕ್ಷರತಾ ಪ್ರೇರಕರು ಸಮಾನತಾ ಕೋರ್ಸ್‌ಗಳಿಗೆ ಅರ್ಹ ಕಲಿಕಾರ್ಥಿಗಳನ್ನು ಗುರುತಿಸಿ ನೋಂದಣಿ ಪ್ರಕ್ರಿಯೆ ನಡೆಸುತ್ತಿದ್ದಾರೆ.

ಹೈಯರ್ ಸೆಕೆಂಡರಿ ಕೋರ್ಸ್‌ಗೆ ಪ್ರವೇಶ ಶುಲ್ಕ ಮತ್ತು ಕೋರ್ಸ್ ಶುಲ್ಕ ಸೇರಿ ₹2,600 ಪಾವತಿಸಬೇಕು. ಹತ್ತನೇ ತರಗತಿ ಸಮಾನತಾ ಕೋರ್ಸ್‌ಗೆ ಅರ್ಜಿ ಶುಲ್ಕ ಹಾಗೂ ಕೋರ್ಸ್ ಶುಲ್ಕ ಸೇರಿ ₹1,950 ನಿಗದಿಪಡಿಸಲಾಗಿದೆ. ಕಲಿಕಾರ್ಥಿಗಳ ನೋಂದಣಿ ಶುಲ್ಕವನ್ನು ಪಂಚಾಯತ್‌ಗಳು ತಮ್ಮ ವಾರ್ಷಿಕ ಯೋಜನೆಯ ಮೂಲಕ ಒದಗಿಸುತ್ತಿವೆ.

ಜಿಲ್ಲಾ ಪಂಚಾಯತ್ ಜಾರಿಗೊಳಿಸುತ್ತಿರುವ ‘ಪತ್ತೇಮಾರಿ’ ಸಂಪೂರ್ಣ ಹತ್ತನೇ ತರಗತಿ ಸಮಾನತಾ ಯೋಜನೆಗೆ ₹5 ಲಕ್ಷ ಮೀಸಲಿಡಲಾಗಿದೆ.

ಸಮಾನತಾ ಕೋರ್ಸ್‌ಗಳ ಕಲಿಕಾರ್ಥಿಗಳಿಗೆ ಭಾನುವಾರ ಹಾಗೂ ಸಾರ್ವಜನಿಕ ರಜಾದಿನಗಳಲ್ಲಿ ಜಿಲ್ಲೆಯ ಪ್ರಮುಖ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸಂಪರ್ಕ ತರಗತಿಗಳನ್ನು ನಡೆಸಲಾಗುತ್ತದೆ. ಪರೀಕ್ಷೆಗೆ ಅರ್ಹತೆ ಪಡೆಯಲು ಶೇಕಡಾ 60ರಷ್ಟು ಹಾಜರಾತಿ ಕಡ್ಡಾಯವಾಗಿದೆ.

ವಿವಿಧ ಸಮಾನತಾ ಕೋರ್ಸ್‌ಗಳಿಗೆ ನೋಂದಣಿ ಮಾಡಿಕೊಳ್ಳಲು ಅಕ್ಟೋಬರ್ 31 ಕೊನೆಯ ದಿನವಾಗಿದೆ.

ಸಮರಸ ಸುದ್ದಿ | www.samarasasudhi.com 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries