HEALTH TIPS

ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಹಾತ್ಮ ಗಾಂಧೀಜಿಯವರ 157 ನೇ ಜನ್ಮ ದಿನಾಚರಣೆ

ಬದಿಯಡ್ಕ: ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಮುಖ್ಯೋಪಾಧ್ಯಾಯನಿ  ಶಾಯಿದ ಬೀವಿ ಧ್ವಜಾರೋಹಣಗೈದು ಮಾತನಾಡಿ, ಗಾಂಧಿಯವರು ನನ್ನ ಜೀವನವೇ ನನ್ನ ಸಂದೇಶ ಎಂದು ಸಾರಿದವರು. ಸತ್ಯ, ಅಹಿಂಸೆ ಸರಳತೆ, ಸೇವೆ ,ದೇಶಭಕ್ತಿ  ಅವರು ಹಾಕಿಕೊಟ್ಟ ಭದ್ರಬುನಾದಿಯಾಗಿ  ದೇಶದ ಪ್ರಗತಿಗೆ ಕಾರಣವೆಂದು ಅಭಿಪ್ರಾಯಪಟ್ಟರು.


ವಾರ್ಡು ಜನಪ್ರತಿನಿಧಿ ಪಂಚಾಯತ್ ಉಪಾಧ್ಯಕ್ಷೆ  ಅಶ್ವಿನಿ ಕೆ ಎಂ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ  ಹಮೀದ್ ಕೆಡೆಂಜಿ  , ಉಪ ಮುಖ್ಯೋಪಾಧ್ಯಾಯ  ಉಣ್ಣಿಕೃಷ್ಣನ್  ಮೊದಲಾದವರು ಶುಭ ಹಾರೈಸಿದರು. ಶಾಲಾ ಅಧ್ಯಾಪಕ ವೃಂದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕ  ನಿರಂಜನ್ ರೈ ಪೆರಡಾಲ ಸ್ವಾಗತಿಸಿ, ನಟರಾಜ ರಾಜ್ ಪಟ್ಟಾಜೆ ವಂದಿ ಸಿದರು. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಶಾಲಾ  ಎಸ್ ಪಿಸಿ ,ಎನ್ ಪಿ ಸಿ ಸ್ಕೌಟ್- ಗೈಡ್ಸ್, ರೆಡ್ ಕ್ರಾಸ್ ವಿದ್ಯಾರ್ಥಿಗಳು  ಶಾಲಾ ಶುಚಿಕರಣ ಯಜ್ಞದಲ್ಲಿ ಪಾಲ್ಗೊಂಡರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries