ನವದೆಹಲಿ: ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಮ್‌ಎಫ್)ಯು 2026-27ನೇ ಸಾಲಿನ ಭಾರತದ ಒಟ್ಟು ದೇಶಿ ಉತ್ಪನ್ನ (ಜಿಡಿಪಿ) ಬೆಳವಣಿಗೆಯ ಮುನ್ನೋಟವನ್ನು ಶೇ.7ಕ್ಕೆ ಹೆಚ್ಚಿಸಿದೆ. ಇದು ಅದರ ಜುಲೈ ಮುನ್ನೋಟ ಶೇ. 6.4ರಿಂದ ಹೆಚ್ಚಾಗಿದೆ.
ದೇಶಿ ಬೇಡಿಕೆಯಲ್ಲಿನ ಗಣನೀಯ ಹೆಚ್ಚಳ ಮತ್ತು ಸೇವಾ ವಲಯದಲ್ಲಿನ ಉತ್ತಮ ವ್ಯವಹಾರಗಳ ಬಲದಿಂದ, ಆರ್ಥಿಕತೆಯಲ್ಲಿ ನಿರೀಕ್ಷೆಗಿಂತ ಬಲವಾದ ವೇಗ ಕಂಡುಬಂದ ಹಿನ್ನೆಲೆಯಲ್ಲಿ ಮುನ್ನೋಟವನ್ನು ಪರಿಷ್ಕರಿಸಲಾಗಿದೆ.
ಇದಕ್ಕೂ ಮೊದಲು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈ ವರ್ಷದ ತನ್ನ ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು ಶೇ. 7.1ಕ್ಕೆ ನಿಗದಿಪಡಿಸಿತ್ತು.
ಭಾರತದ 2027-28ರ ಸಾಲಿನ ಜಿಡಿಪಿ ಬೆಳವಣಿಗೆಯ ತನ್ನ ಮುನ್ನೋಟವನ್ನೂ ಐಎಮ್‌ಎಫ್ ಶೆ.7ಕ್ಕೆ ಹೆಚ್ಚಿಸಿದೆ. ಜುಲೈನಲ್ಲಿ ಅದರ ಈ ಮುನ್ನೋಟವು ಶೇ. 6.7 ಆಗಿತ್ತು.
ಐಎಮ್‌ಎಫ್ ಪ್ರಕಾರ, 2026-27ರಲ್ಲಿ ಭಾರತವೇ ಜಾಗತಿಕ ಆರ್ಥಿಕತೆಯನ್ನು ಮುನ್ನಡೆಸಲಿದೆ. ಭಾರತದ ಜಿಡಿಪಿ ಬೆಳವಣಿಗೆಯು ವಿಶ್ವ ಆರ್ಥಿಕತೆಯ ಚಾಲನಾ ಶಕ್ತಿಯಾಗಲಿದೆ ಎಂದು ಅದು ಹೇಳಿದೆ.
2026ರಲ್ಲಿ ಜಾಗತಿಕ ಆರ್ಥಿಕತೆಯ ಬೆಳವಣಿಗೆ ಕೇವಲ 3.1% ಎಂದು ಅದು ಹೇಳಿದೆ. ಇದು ಜುಲೈನಲ್ಲಿ ಅಂದಾಜಿಸಲಾಗಿದ್ದ ಶೇ. 3ಕ್ಕಿಂತ ಸ್ವಲ್ಪ ಹೆಚ್ಚಾಗಿದೆ.
ಅದೇ ವೇಳೆ, 2027ರ ಜಾಗತಿಕ ಆರ್ಥಿಕ ಬೆಳವಣಿಗೆಯು ಯಾವುದೇ ಬದಲಾವಣೆಯಿಲ್ಲದೆ ಶೇ. 3.4ರಲ್ಲೇ ಇರಲಿದೆ ಎಂದು ಅದು ನಿರೀಕ್ಷಿಸಿದೆ.



