HEALTH TIPS

2047ರ ವಿಕಸಿತ ಭಾರತದ ಕಸನು: 'ವಿ ವಿಲ್ ಡು ಇಟ್' ಎಂದ ಪ್ರಧಾನಿ ಮೋದಿ

ನವದೆಹಲಿ: 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ (ವಿಕಸಿತ ಭಾರತ) ಮಾಡುವ ಕನಸನ್ನು ನನಸು ಮಾಡುತ್ತೇವೆ (ವಿ ವಿಲ್ ಡು ಇಟ್) ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. 


ದೂರದೃಷ್ಟಿಯ ನೀತಿಗಳು ಹಾಗೂ ಕಠಿಣ ಪರಿಶ್ರಮದ ಮೂಲಕ ಈ ಗುರಿಯನ್ನು ತಲುಪಲಿದ್ದೇವೆ ಎಂದೂ ಅವರು ಹೇಳಿದ್ದಾರೆ.

ಗುಜರಾತ್‌ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಿಯಾಗಿ ಮೋದಿ ಅವರು ಸತತ 25 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ 'ವಿಕಸಿತ ಭಾರತ ಸಂಕಲ್ಪ ಸಭಾ'ವನ್ನು ಉದ್ದೇಶಿಸಿ ಮಾತನಾಡಿದ ಅವರು, ವೋಟ್‌ಬ್ಯಾಂಕ್ ರಾಜಕೀಯಕ್ಕಾಗಿ ಸಮಾಜವನ್ನು ವಿಭಜಿಸುವುದು ದೇಶ ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದಿದ್ದಾರೆ.

'ರೈತನ ಹೊಲಕ್ಕೆ ನೀರಿಲ್ಲದಿದ್ದಾಗ, ಆ ಸಮಸ್ಯೆ ಕೇವಲ ಒಂದು ಜಾತಿಗೆ ಮಾತ್ರ ಸೀಮಿತವಾಗಿರುತ್ತದೆಯೇ?, ವಿದ್ಯುತ್ ಇಲ್ಲದಿದ್ದಾಗ ಕತ್ತಲು ಕೇವಲ ಒಂದು ಸಮುದಾಯದವನ್ನು ಆವರಿಸುತ್ತದೆಯೇ? ಖಂಡಿತ ಇಲ್ಲ. ಸಮಸ್ಯೆ ಎಲ್ಲರದ್ದೂ ಎಂದಮೇಲೆ, ಪರಿಹಾರವೂ ಎಲ್ಲರಿಗೂ ತಲುಪಬೇಕು' ಎಂದು ಮೋದಿ ಹೇಳಿದ್ದಾರೆ.

ಇಂದು ದೇಶದ ಜನರು ಕಾಣುತ್ತಿರುವ ವಿಕಸಿತ ಭಾರತದ ಕನಸು ಖಂಡಿತವಾಗಿಯೂ ನನಸಾಗಲಿದೆ. ನೂರು ವರ್ಷಗಳ ಹಿಂದೆ ನಮ್ಮ ಜನಸಂಖ್ಯೆ 40 ಕೋಟಿಗಿಂತ ಕಡಿಮೆಯಿತ್ತು; ಇಂದು ನಾವು 140 ಕೋಟಿಗೂ ಮೀರಿದ್ದೇವೆ. 140 ಕೋಟಿ ನಾಗರಿಕರು ಒಟ್ಟಾಗಿ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲಿದ್ದಾರೆ. 'ವಿಕಸಿತ ಭಾರತ: ವಿ ವಿಲ್ ಡು ಇಟ್', 'ಟಾಪ್ 3 ಆರ್ಥಿಕತೆ: ವಿ ವಿಲ್ ಡು ಇಟ್', 'ಆತ್ಮನಿರ್ಭರ ಭಾರತ: ವಿ ವಿಲ್ ಡು ಇಟ್', 'ಜಾಗತಿಕ ಉತ್ಪಾದನಾ ಹಬ್: ವಿ ವಿಲ್ ಡು ಇಟ್', 'ಒಲಿಂಪಿಕ್ಸ್ ಆತಿಥ್ಯ: ವಿ ವಿಲ್ ಡು ಇಟ್' ಈ ಆತ್ಮವಿಶ್ವಾಸ ಅಸಾಧಾರಣವಾದದ್ದು ಎಂದು ಮೋದಿ ಬಣ್ಣಿಸಿದ್ದಾರೆ.

ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನವನ್ನು ಸಹ-ಪೈಲಟ್ ಪತನಗೊಳಿಸಲು ಯತ್ನಿಸಿದಾಗ ಇರಿತಕ್ಕೊಳಗಾಗಿಯೂ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರ ಸಾಹಸವನ್ನು ಪ್ರಧಾನಿ ಸ್ಮರಿಸಿದರು. 'ಇಂದು ಇಡೀ ವಿಶ್ವವೇ ಭಾರತದ ಪೈಲಟ್ ಬಗ್ಗೆ ಮಾತನಾಡುತ್ತಿದೆ. ಭಾರತದಲ್ಲೇ ತಯಾರಾದ ವಿಮಾನಗಳ (ಮೇಡ್ ಇನ್ ಇಂಡಿಯಾ) ಬಗ್ಗೆ ಪ್ರಪಂಚವೇ ಮಾತನಾಡುವ ದಿನವೂ ಶೀಘ್ರದಲ್ಲೇ ಬರಲಿದೆ' ಎಂದಿದ್ದಾರೆ.

ಜನರೇ ದೇವರು ಮತ್ತು ಬಿಜೆಪಿ ಕಾರ್ಯಕರ್ತರೇ ನನ್ನ ಶಕ್ತಿ

2001ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರು, ಸತತವಾಗಿ ಮೂರು ಬಾರಿ ಗುಜರಾತ್ ಸಿಎಂ ಆಗಿ ಹಾಗೂ ಸತತ ಮೂರು ಬಾರಿ ಲೋಕಸಭಾ ಚುನಾವಣೆಗಳಲ್ಲಿ ಗೆದ್ದು ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದು, ಸರ್ಕಾರದ ಮುಖ್ಯಸ್ಥರಾಗಿ 25 ವರ್ಷ ಪೂರೈಸಿದ್ದಾರೆ.

ಈ ಮೈಲಿಗಲ್ಲಿನ ಕುರಿತು ಮಾತನಾಡಿದ ಅವರು, '2001ರಲ್ಲಿ ನಾನು ಪ್ರಮಾಣವಚನ ಸ್ವೀಕರಿಸಿದಾಗ ಈ ಹಂತಕ್ಕೆ ತಲುಪುತ್ತೇನೆ ಎಂದು ಊಹಿಸಿರಲಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟ ಭಾರತದ ಜನತೆಗೆ ಶಿರಸಾಷ್ಟಾಂಗ ನಮಸ್ಕಾರಗಳು. ನನಗೆ ಜನರೇ ದೇವರು ಮತ್ತು ಬಿಜೆಪಿ ಕಾರ್ಯಕರ್ತರೇ ನನ್ನ ಶಕ್ತಿ' ಎಂದು ಧನ್ಯವಾದ ಅರ್ಪಿಸಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries