ಗುವಾಹಟಿ (PTI): 'ಜನವರಿಯಿಂದ ಸೆಪ್ಟೆಂಬರ್‌ವರೆಗೆ 250ಕ್ಕೂ ಹೆಚ್ಚು ಆನೆಗಳನ್ನು ರೈಲು ಅಪಘಾತಗಳಿಂದ ರಕ್ಷಣೆ ಮಾಡಲಾಗಿದೆ' ಎಂದು ಈಶಾನ್ಯ ಗಡಿ ರೈಲ್ವೆ (ಎನ್‌ಎಫ್‌ಆರ್) ಭಾನುವಾರ ತಿಳಿಸಿದೆ.
'ಆಲಿಪುರ್‌ದ್ವಾರ್, ರಂಗಿಯಾ, ಲುಮ್‌ಡಿಂಗ್ ಮತ್ತು ಟಿನ್ಸುಕಿಯಾ ವಿಭಾಗಗಳ ರೈಲ್ವೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ 255 ಆನೆಗಳ ಪ್ರಾಣ ರಕ್ಷಣೆ ಆಗಿದೆ' ಎಂದು ಎನ್‌ಎಫ್‌ಆರ್ ವಕ್ತಾರ ಕಪಿಂಜಲ್ ಕಿಶೋರ್ ಶರ್ಮಾ ತಿಳಿಸಿದ್ದಾರೆ.
ಆನೆ ಕಾರಿಡಾರ್‌ಗಳಲ್ಲಿ ಕೆಳಸೇತುವೆಗಳ ನಿರ್ಮಾಣ, ಜೇನುನೊಣದ ಧ್ವನಿಯ ಮಾದರಿ ಹಾರ್ನ್‌ಗಳನ್ನು ಬಳಸಿ ಆನೆಗಳು ಹಳಿ ಮೇಲೆ ಬರದಂತೆಯೂ ತಡೆಯಲಾಗಿದೆ' ಎಂದು ಅವರು ತಿಳಿಸಿದ್ದಾರೆ.

