HEALTH TIPS

ವಯೋವೃದ್ಧರನ್ನು ಅನಾಥರಂತೆ ಕೈಬಿಟ್ಟರೆ 3 ವರ್ಷ ಜೈಲು; ₹50 ಸಾವಿರ ದಂಡಕ್ಕೆ ಶಿಫಾರಸು

 ಕೇರಳ ವಿಧಾನಸಭೆಯಲ್ಲಿ  ವಯೋವೃದ್ಧರ ಕಲ್ಯಾಣ ಮಸೂದೆ ಮಂಡನೆ

ತಿರುವನಂತಪುರಂ: ವಯೋವೃದ್ಧರನ್ನು ಕುಟುಂಬದವರು ನಿರ್ಲಕ್ಷಿಸಿ ಕೈಬಿಟ್ಟರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಲು ಶಿಫಾರಸು ಮಾಡಿರುವ ವಯೋವೃದ್ಧರ ಕಲ್ಯಾಣ ಮಸೂದೆಯನ್ನು ಮಂಗಳವಾರ ಕೇರಳ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. 


ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರು ಅಥವಾ ಕಾನೂನುಬದ್ಧ ವಾರಸುದಾರರು ವಯೋವೃದ್ಧರನ್ನು ಕೈಬಿಡುವ ಉದ್ದೇಶದಿಂದ ಅವರ ಅನುಮತಿಯಿಲ್ಲದೆ ಆರೈಕೆ ಕೇಂದ್ರಕ್ಕೆ ಅಥವಾ ಬೇರೆ ಸ್ಥಳಕ್ಕೆ ಕರೆದೊಯ್ದು ಬಿಡುವುದನ್ನು ಅಪರಾಧವೆಂದು ಪರಿಗಣಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಕುಟುಂಬದ ಸದಸ್ಯರು, ಸಂಬಂಧಿಕರು ಅಥವಾ ಆರೈಕೆ ಕೇಂದ್ರದ ಸಿಬ್ಬಂದಿ ವಯೋವೃದ್ಧರಿಗೆ ದೈಹಿಕ ಅಥವಾ ಮಾನಸಿಕ ಕಿರುಕುಳ ನೀಡಿದರೂ ಇದೇ ಶಿಕ್ಷೆ ವಿಧಿಸಲು ಶಿಫಾರಸು ಮಾಡಲಾಗಿದೆ.

‘ಹಿರಿಯ ನಾಗರಿಕರ ಆರೈಕೆ ಮತ್ತು ಹಕ್ಕುಗಳ ರಕ್ಷಣೆ ಮಸೂದೆ’ಯಲ್ಲಿ ವಯೋವೃದ್ಧರ ಸುರಕ್ಷತೆ, ಆರೈಕೆ ಮತ್ತು ಆಸ್ತಿಯ ರಕ್ಷಣೆಗೆ ಸಂಬಂಧಿಸಿದ ಹಲವು ಮಹತ್ವದ ನಿಯಮಗಳನ್ನು ಪ್ರಸ್ತಾಪಿಸಲಾಗಿದೆ.

ಆರೈಕೆ ಕೇಂದ್ರಗಳಿಗೂ ಕಟ್ಟುನಿಟ್ಟಿನ ನಿಯಮ

ಆರೈಕೆ ಕೇಂದ್ರದ ನಿರ್ವಾಹಕರು ಅಲ್ಲಿನ ನಿವಾಸಿಯ ಆಸ್ತಿಯನ್ನು ಅಕ್ರಮವಾಗಿ ವಶಪಡಿಸಿಕೊಂಡರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಲು ಶಿಫಾರಸು ಮಾಡಲಾಗಿದೆ.

ನೋಂದಣಿ ಮಾಡಿಸದೆ ಆರೈಕೆ ಕೇಂದ್ರ ನಡೆಸಿದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ 25 ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ವಯೋವೃದ್ಧರ ಕಲ್ಯಾಣ ಕಾನೂನಿನಡಿ ಬರುವ ಎಲ್ಲ ಅಪರಾಧಗಳ ವಿಚಾರಣೆಯನ್ನು ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಸಲು ಮಸೂದೆ ಪ್ರಸ್ತಾಪಿಸಿದೆ. ಆರೈಕೆ ಸಂಸ್ಥೆಗಳಲ್ಲಿ ಅಪರಾಧ ನಡೆದರೆ ಸಂಸ್ಥೆಯ ನಿರ್ದೇಶಕರು, ಟ್ರಸ್ಟಿಗಳು ಅಥವಾ ವ್ಯವಸ್ಥಾಪಕರು ಹೊಣೆಗಾರರೆಂದು ಕಂಡುಬಂದಲ್ಲಿ ಅವರಿಗೂ ಶಿಕ್ಷೆ ವಿಧಿಸಬಹುದು.

ಮಸೂದೆಯ ಪ್ರಮುಖ ಪ್ರಸ್ತಾವನೆಗಳು

  • ದೂರುಗಳ ನಿರ್ವಹಣೆ: ವಯೋವೃದ್ಧರ ದೂರುಗಳನ್ನು ಸ್ವೀಕರಿಸಲು ಸಹಾಯಕ ಇನ್‌ಸ್ಪೆಕ್ಟರ್‌ಗಿಂತ ಕಡಿಮೆಯಲ್ಲದ ದರ್ಜೆಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸುವುದು.

  • ಕಡ್ಡಾಯ ನೋಂದಣಿ: ಎಲ್ಲ ಆರೈಕೆ ಕೇಂದ್ರಗಳಿಗೂ ನೋಂದಣಿ ಕಡ್ಡಾಯ. ನಿಗದಿತ ಗುಣಮಟ್ಟ, ಆರೈಕೆದಾರರಿಗೆ ತರಬೇತಿ ಮತ್ತು ಪ್ರಮಾಣಪತ್ರದ ವ್ಯವಸ್ಥೆ ಜಾರಿ.

  • ಪೊಲೀಸ್ ಪರಿಶೀಲನೆ: ವಯೋವೃದ್ಧರೊಂದಿಗೆ ವಾಸವಿದ್ದು ಆರೈಕೆ ಮಾಡುವವರಿಗೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಕಡ್ಡಾಯ.

  • ಸೈಬರ್ ಸುರಕ್ಷತೆ: ಸೈಬರ್ ಪೊಲೀಸ್ ಠಾಣೆಗಳಲ್ಲಿ ಹಿರಿಯ ನಾಗರಿಕರಿಗಾಗಿ ವಿಶೇಷ ಸೈಬರ್ ಘಟಕ ಹಾಗೂ ಸಮನ್ವಯ ಅಧಿಕಾರಿಗಳ ನೇಮಕ. ಸೈಬರ್ ವಂಚನೆ ತಪ್ಪಿಸಲು ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮಗಳ ಆಯೋಜನೆ.  









  • **

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries